ಪ್ರಿಯಕರನ ಹತ್ಯೆಗೈದ ಪ್ರೇಯಸಿ ಸಂಬಂಧಿಗಳು

7 OCT KUDUR CRIME NEWS PHOTO 1 LAKSHIMPATHI - Copy
Published on

ಕುದೂರು: ಪ್ರೀತಿಯ ವಿಚಾರವಾಗಿ ಯುವತಿಯ ಸಂಬಂಧಿಕರು ಆಕೆಯ ಪ್ರಿಯಕರನನ್ನು ಸಂಬಂಧಿ ಎದುರೇ ಮಂಗಳವಾರ ಹತ್ಯೆ ಮಾಡಿದ್ದಾರೆ.

ನೆಲಮಂಗಲದ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ (24) ಮೃತ. ಈತನ ಪ್ರೇಯಸಿ 20 ವರ್ಷದ ಮುಸ್ಲಿಂ ಯುವತಿಯ ಸಂಬಂಧಿಗಳಾದ ನಿಜಾಮುದ್ದಿನ್ ಮತ್ತು ಸಿಕಂದರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.

ಲಕ್ಷ್ಮೀಪತಿ ಹಾಗೂ ನೆಲಮಂಗಲ ಬಳಿಯ ಇಸ್ಲಾಂಪುರ ಗ್ರಾಮದ ಯುವತಿ 3 ವರ್ಷಗಳಿಂದ ಗಾರ್ವೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಯುವತಿ ಮನೆಯವರು ಹಲವು ಬಾರಿ ವಿರೋಧಿಸಿದ್ದರು. ಲಕ್ಷ್ಮೀಪತಿಗೆ ಯುವತಿಯಿಂದ ಕರೆ ಮಾಡಿಸಿದ ಸಂಬಂಧಿಗಳು ಮದುವೆ ವಿಷಯ ಮಾತನಾಡಲು ಸೋಲೂರು ಬಳಿ ಬರುವಂತೆ ತಿಳಿಸಿದ್ದಾರೆ. ಲಕ್ಷ್ಮೀಪತಿ ನಟರಾಜ್ ಎಂಬುವವರ ಜತೆ ಹೋಗಿದ್ದಾನೆ. ಕಂಕೇನಹಳ್ಳಿ ಲಾಯಾ ದರ್ಗಾ ಬಳಿ ಯುವತಿಯ ಸಂಬಂಧಿಗಳು ಲಕ್ಷ್ಮೀಪತಿಯ ಕೈಕಾಲು ಕಟ್ಟಿ ಆತನ ಸೊಂಟದಲ್ಲಿದ್ದ ಬೆಲ್ಟ್ ತೆಗೆದು ಕುತ್ತಿಗೆಗೆ ಬಿಗಿದು, ಮದ್ಯದ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಅಲ್ಲದೆ,ವಿಚಾರವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ನಟರಾಜ್​ಗೆ ಬೆದರಿಕೆ ಹಾಕಿ, ಪರಾರಿಯಾಗಿದ್ದಾರೆ.

ನಟರಾಜ್ ಮಾಹಿತಿ ಮೇರೆಗೆ ಕುದೂರು ಪೊಲೀಸರು ಸ್ಥಳ ಪರಿಶೀಲಿಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುದೂರು ಪೊಲೀಸರು ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net