ಸಂಬಂಧ ಬೆಸೆಯುವ ಜನಪದ ಸಾಹಿತ್ಯ

17 NRD 3
Published on

ನರಗುಂದ: ಜನಪದ ಈ ನೆಲದ ಸಂಸ್ಕೃತಿಯ ಪ್ರತೀಕ. ಬದುಕು ಹಾಗೂ ಸಂಬಂಧವನ್ನು ಕಟ್ಟಲು ಜನಪದ ಸಾಹಿತ್ಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಜಾನಪದ ಸಾಹಿತ್ಯ ಸಾರ್ವಕಾಲಿಕವಾಗಿದೆ ಎಂದು ಶಾಂತಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್, ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 365ನೇ ಮಾಸಿಕ ಶಿವಾನುಭವದಲ್ಲಿ ಅವರು ಮಾತನಾಡಿದರು.

ಜನಪದ ಸಂಸ್ಕೃತಿಯನ್ನು ದೇಶಾದ್ಯಂತ ಉಳಿಸಿ ಬೆಳೆಸುತ್ತಿರುವ ಜೈ ಕಿಸಾನ್ ಕಲಾ ತಂಡದವರ ಜನಪದ ಸೇವೆ ಅಪಾರ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಬಂಡಾಯ ನೆಲದ ಸಂಸ್ಕೃತಿಯನ್ನು ಪಸರಿಸಿದ್ದಾರೆ ಎಂದರು.

ಮುಖ್ಯ ಅತಿಥಿ ಚೆನ್ನಬಸಪ್ಪ ಕಂಠಿ ಮಾತನಾಡಿ, ಜನಪದ ಉಳಿದರೆ ಮಾತ್ರ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಲು ಸಾಧ್ಯವಾಗುತ್ತದೆ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅನಿವಾರ್ಯ ಎಲ್ಲರಿಗೂ ಸೃಷ್ಟಿಯಾಗಿದೆ ಎಂದರು. ಔಷಧ ವ್ಯಾಪಾರಸ್ಥ ಮಹಾಂತೇಶ ಸಾಲಿಮಠ ಮಾತನಾಡಿದರು. ನೀಲಗುಂದದ ಮಂಜುನಾಥ ಶರಣರು, ಡಾ.ವೈ.ಎಂ. ಯಾಕೊಳ್ಳಿ, ಪಿ.ಸಿ. ಕಲಹಾಳ, ನ್ಯಾಯವಾದಿ ಶಿವಕುಮಾರ ಶೆಲ್ಲಿಕೇರಿ, ಸುವರ್ಣ ಶೆಲ್ಲಿಕೇರಿ, ರಮೇಶ ಅಣ್ಣಿಗೇರಿ, ಪ್ರಕಾಶ ಅಣ್ಣಿಗೇರಿ, ಭೀಮಸೇನ್ ಪವಾರ, ಬಿ.ಎಂ. ಗೊಜನೂರ, ವೀರಭದ್ರಪ್ಪ ಅಣ್ಣಿಗೇರಿ, ರೇವಣಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು. ಪ್ರೊ. ರಮೇಶ ಐನಾಪುರ, ಮಹಾಂತೇಶ ಹಿರೇಮಠ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net