ಕೂಳಗೆರೆ ಗ್ರಾಪಂಗೆ ರೇಖಾ ನಂಜುಂಡಸ್ವಾಮಿ ಅಧ್ಯಕ್ಷೆ

30M.D.R.4
Published on

ಮದ್ದೂರು: ತಾಲೂಕಿನ ಕೂಳಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ರೇಖಾ ನಂಜುಂಡಸ್ವಾಮಿ ಚುನಾಯಿತರಾದರು.

ಉಮಾಪುಟ್ಟಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆ ವೇಳೆ ಎನ್‌ಡಿಎ ಬೆಂಬಲಿತ ಅಭ್ಯಥಿಯಾಗಿ ರೇಖಾ ನಂಜುಂಡಸ್ವಾಮಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಉಮಾ ನಿಂಗರಾಜ್ ನಾಮಪತ್ರ ಸಲ್ಲಿಸಿದರು.

ಒಟ್ಟು 15 ಮತಗಳ ಪೈಕಿ ಅರೆಕಲ್ಲು ದೊಡ್ಡಿ ಗ್ರಾಮದ ಗ್ರಾಪಂ ಸದಸ್ಯ ತಿಬ್ಬೇಗೌಡ ಗೈರುಹಾಜರಿ ನಡುವೆ ನಡೆದ ಚುನಾವಣೆಯಲ್ಲಿ ರೇಖಾ ನಂಜುಂಡಸ್ವಾಮಿ 8 ಮತಗಳು ಪಡೆದು ಗೆಲುವು ಸಾಧಿಸಿದರು. ಉಮಾ ನಿಂಗರಾಜು ಅವರು 6 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ತಾಪಂ ಇಒ ರಾಮಲಿಂಗಯ್ಯ ಘೋಷಣೆ ಮಾಡಿದರು.

ನೂತನ ಅಧ್ಯಕ್ಷೆ ರೇಖಾ ನಂಜುಂಡಸ್ವಾಮಿ ಮಾತನಾಡಿ, ಪಂಚಾಯಿತಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಮೂಲಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪಂಚಾಯಿತಿ ಎಲ್ಲ ಸದಸ್ಯರ ವಿಶ್ವಾಸ ಪಡೆದು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಗ್ರಾಪಂ ಸದಸ್ಯರಾದ ರೇಖಾ, ಕುಮಾರಿ, ಜಯಮ್ಮಾ, ಮುಖಂಡರಾದ ಕೆ.ಟಿ.ಶೇಖರ್, ಮಂಡ್ಯ ಮಲ್ಲೇಶ್, ಕೆ.ಟಿ.ನಂದೀಶ್, ಕೆ.ಟಿ.ಅನಿಲ್‌ಕುಮಾರ್, ಪಿಡಿಒ ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net