ರೇಖಾ ಮಹದೇವ್ ಭೇರ್ಯ ಗ್ರಾಪಂ ಅಧ್ಯಕ್ಷೆ

IMG_20250908_124237_96
ಭೇರ್ಯ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ರೇಖಾ ಆಯ್ಕೆಯಾದರು.
Published on

ಸಾಲಿಗ್ರಾಮ: ಭೇರ್ಯ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಟಿಗನಹಳ್ಳಿ ಬಿ.ಎಚ್.ರೇಖಾ ಮಹದೇವ್ ಆಯ್ಕೆಯಾದರು.

ಬಿ.ಕೆ.ಮಂಜಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿ.ಎಚ್.ರೇಖಾ ಮಹದೇವ್ ಮತ್ತು ಬಿ.ಎಸ್. ಕೃಷ್ಣೇಗೌಡ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಬಿ.ಎಚ್.ರೇಖಾ ಮಹದೇವ್ 8 ಮತ ಪಡೆದು ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಕೃಷ್ಣೇಗೌಡ 7 ಮತ ಪಡೆದು ಪರಾಭವಗೊಂಡರು. ಚುನಾವಣಾ ಅಧಿಕಾರಿ ಪಶು ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ. ರಾಮು ಚುನಾವಣೆ ಪ್ರಕ್ರಿಯೆ ನಡೆಸಿದರು. ನೂತನ ಅಧ್ಯಕ್ಷರನ್ನು ಅವರನ್ನು ಸದಸ್ಯರು ಮತ್ತು ಸಿಬ್ಬಂದಿ ಅಭಿನಂದಿಸಿದರು.

ಸದಸ್ಯರಾದ ಬಿ.ಕೆ. ಮಂಜಪ್ಪ, ಎಚ್.ಡಿ. ರೂಪಾ, ಮೋಹಸೀನ್ ತಾಜ್, ಬಿ.ಕೆ. ಶಿವಕುಮಾರ್, ಜಯಲಕ್ಷ್ಮಮ್ಮ, ಬಿ.ಪಿ. ಪ್ರಕಾಶ್, ಹರ್ಷವರ್ಧನಿ, ತಾಯಮ್ಮ , ಬಿ.ಎಲ್. ರಾಜಶೇಖರ್, ಬಿ.ಕೆ.ಕುಮಾರ್, ರೇಖಾ, ಜ್ಯೋತಿ, ಶಾಂತಮ್ಮ, ಬಿ ಬಿ ಶಿವಣ್ಣ, ಬಿ ಎಸ್ ಕೃಷ್ಣೇಗೌಡ, ಪಿಡಿಒ ಮಮತಾ, ಬಿ.ಟಿ. ಮೋಹನ್ ಕುಮಾರ್, ಟ್ಯಾಂಕ್ ಮಹೇಶ್, ತನ್ನು, ಕಾಳೇಗೌಡ, ಕಾಳಯ್ಯ, ರಂಗಯ್ಯ, ಸೋಮು, ಶೇಖರ್, ಉದಯ್, ಶಿವಕುಮಾರನಾಯಕ, ರಾಮ ಶೆಟ್ಟಿ, ನವೀನ್, ಶಿವಣ್ಣ, ಕೃಷ್ಣಯ್ಯ ಜಯಂತ್, ಅಶ್ವಿನಿ, ಕುಮಾರ್, ಗೋವಿಂದ.ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net