ಅಧ್ಯಾಪಕರಲ್ಲಿ ಪುನಶ್ಚೇತನ

BRM college pror Ab23 (1)
Published on

ಭರಮಸಾಗರ: ಪುನರ್ಮನ ಕಾರ್ಯಕ್ರಮ ಅಧ್ಯಾಪಕರನ್ನು ಪುನಶ್ಚೇತನ ಗೊಳಿಸುವಲ್ಲಿ ಸಹಕಾರಿ ಆಗಿದೆ ಎಂದು ಪ್ರಾಚಾರ್ಯ ಡಾ.ಆರ್.ಶಶಿಕಲಾ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೈಹಿಕ ಶಿಕ್ಷಣ ಎನ್‌ಇಪಿ ಪಠ್ಯಕ್ರಮದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಭೌತಿಕವಾಗಿ ಸಧೃಢಗೊಳಿಸುವುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ. ಪ್ರಸ್ತುತ ಸಾಲಿನಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕಳುಹಿಸಿಕೊಡಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ತಿಪ್ಪೇಸ್ವಾಮಿ, ಶಂಕ್ರಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಂ.ವೀರೇಂದ್ರ, ಅಧ್ಯಾಪಕ ಸತ್ಯನಾರಾಯಣ್, ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಿ.ಪ್ರಸನ್ನಕುಮಾರ್, ಚಂದ್ರಶೇಖರಪ್ಪ, ಪಿ.ಎಸ್.ಹರೀಶ್, ಎಂ.ಎಸ್.ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net