ತಿಪಟೂರಲ್ಲಿ ವೈದ್ಯರ ನೇಮಕಕ್ಕೆ ನಕಾರ?

3
ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಭೇಟಿ ನೀಡಿದಾಗ ದಾದಿಯರು ಅಳಲು ತೋಡಿಕೊಂಡರು. ಶಾಸಕ ಷಡಕ್ಷರಿ. ಡಿಎಚ್​ಒ ಡಾ.ಚಂದ್ರಶೇಖರ್​, ಟಿಎಚ್​ಒ ಡಾ.ರಾಧಿಕಾ, ಡಾ.ಶಿವಕುಮಾರ್​, ಡಾ.ಪ್ರಕಾಶ್​, ಡಾ.ರವಿ, ಟಿ.ಎನ್​.ಪ್ರಕಾಶ್​ ಇದ್ದರು.
Published on

ಸಚಿವರ ಮುಂದೆ ಸಮಸ್ಯೆಗಳ ಸುರಿಮಳೆ - ಪಿಪಿಪಿ ಮಾದರಿ ಮೆಡಿಕಲ್​ ಕಾಲೇಜಿಗೆ ಸಮ್ಮತಿ

ತಿಪಟೂರು: ಮೆಡಿಕಲ್​ ಮುಗಿದ ತಕ್ಷಣ ಪಿಜಿಗೆ ಹೋಗುವ ವೈದ್ಯರನ್ನು ಉಳಿಸಿಕೊಳ್ಳುವ ಪ್ರಯತ್ನವಾಗಬೇಕಿದೆ ಎಂದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಸಿಬ್ಬಂದಿ ಸಮಸ್ಯೆ ಎದುರಿಸುತ್ತಿರುವ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ತಕ್ಷಣಕ್ಕೆ ಅಗತ್ಯವಿರುವ ನೇಮಕಾತಿಗೆ ಹಿಂದೇಟು ಹಾಕಿದರು.

ಬುಧವಾರ ಸಂಜೆ, ನಗರದ ಸಾರ್ವಜನಿಕ ಅಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದ ಸಚಿವರಿಗೆ, ಇಲ್ಲಿನ ವೈದ್ಯರು ಕರ್ತವ್ಯದಲ್ಲಿರುವುದಿಲ್ಲ. ತುರ್ತು ಸಂದರ್ಭಗಳಲ್ಲಿ ರಾತ್ರಿ ವೇಳೆ ದಾಖಲಾಗುವ ರೋಗಿಗಳಿಗೆ ತುರ್ತು ಸೇವೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ವೈದ್ಯಧಿಕಾರಿ ಡಾ.ಶಿವಕುಮಾರ್​, ಅಸಲಿಗೆ ಇಲ್ಲಿ ಮುಖ್ಯ ಆರೋಗ್ಯಾಧಿಕಾರಿ ನೇಮಕವಾದರೆ ಸಿಬ್ಬಂದಿ ಸಂಖ್ಯೆಯೂ ಹೆಚ್ಚಿ, ಸಮಸ್ಯೆಗಳಿ ಪರಿಹಾರ ಸಿಗುತ್ತದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರು ಮರುದಿನ ಬರಲ್ಲ. ಇನ್ನು ಅರಿವಳಿಕೆ ತರು ಇಲ್ಲದಿರುವುದರಿಂದ ಕನಿಷ್ಠ ಶೇ.10ರಷ್ಟು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳಿಸುವ ಅನಿವಾರ್ಯತೆ ಎಲ್ಲ ಆಸ್ಪತ್ರೆಗಳಲ್ಲೂ ಇದೆ. ಶೇ.50ರಷ್ಟು ವೈದ್ಯರ ಕೊರತೆ ನಡುವೆಯೂ ಲಭ್ಯ ಸಿಬ್ಬಂದಿ ಬಳಸಿಕೊಂಡು ನಿಭಾಯಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರಲ್ಲದೇ ತಕ್ಷಣವೇ ಹೆಚ್ಚುವರಿ ವೈದ್ಯರು, ಅರಿವಳಿಕೆ ತರು, ಚರ್ಮರೋಗ ತರು, ಎಂಆರ್​ಐ, ಸಿಟಿ ಸ್ಕಾ$್ಯನ್​, ಅಲ್ಟ್ರಾ ಸೌಂಡ್​ ಸ್ಕಾನಿಂಗ್​ ಯಂತ್ರ, ಕ್ಷ&ಕಿರಣ ಯಂತ್ರ, ಕಣ್ಣಿನ ವಿಭಾಗಕ್ಕೆ ಸುಧಾರಿತ ಸಲಕರಣೆಗಳು ಮತ್ತು ಸೋಲಾರ್​ ಪ್ಯಾನಲ್​ ಅಳವಡಿಕೆ, ರೋಗಿಗಳ ಕಡೆಯವರು ತಂಗಲು ಡಾರ್ಮೆಟರಿ, ಸೆಕ್ಯೂರಿಟಿ ನೇಮಕಾತಿ ಬಗ್ಗೆ ವೈದ್ಯಾಧಿಕಾರಿ ಡಾ.ಶಿವಕುಮಾರ್​ ಸಲ್ಲಿಸಿದ ಬೇಡಿಕೆಗಳನ್ನು ಕೇಳಲೂ ಸಚಿವರು ಸುಸ್ತಾದಂತೆ ಕಂಡರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್​, ತಾಲೂಕು ಆರೋಗ್ಯಾಧಿಕಾರಿ ಡಾ.ರಾಧಿಕಾ, ವೈದ್ಯಾಧಿಕಾರಿ ಡಾ.ಶಿವಕುಮಾರ್​, ಡಾ.ಪ್ರಕಾಶ್​, ಡಾ.ರವಿ, ಡಾ.ಜಯಪ್ರಕಾಶ್​, ನಗರಸಭೆ ಸದಸ್ಯ ಟಿ.ಎನ್​.ಪ್ರಕಾಶ್​, ಯುವ ಕಾಂಗ್ರೆಸ್​ ಮುಖಂಡ ನಿಖಿಲ್​ ರಾಜಶೇಖರ್​, ತಾಪಂ ಅಧ್ಯಕ್ಷ ಎನ್​.ಎಂ.ಸುರೇಶ್​ ಇದ್ದರು.

ತಿಂಗಳಿಗೆ 200 ಹೆರಿಗೆ

ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಹೊಸದುರ್ಗ, ಹುಳಿಯಾರು ಭಾಗದ ರೋಗಿಗಳು ಇಲ್ಲಿಗೆ ಬರುತ್ತಿದ್ದು, ತಿಂಗಳಿಗೆ ಕನಿಷ್ಠ 200 ಹೆರಿಗೆ ಮಾಡಲಾಗುತ್ತಿದೆ. ಕಳೆದ ಡಿಸೆಂಬರಿನಿಂದ ಇಲ್ಲಿವರೆಗೆ ಒಬ್ಬ ಬಾಣಂತಿ ಸಾವಾಗಿದೆ ಎಂದು ಹೆರಿಗೆ ತ ಡಾ.ರವಿ ಸಚಿವರಿಗೆ ಮಾಹಿತಿ ನೀಡಿದರು.

ಕಟ್ಟಡ ಕಟ್ಟಿದರೆ ಸಾಲದು!

ಕೆಎಂಆರ್​ಸಿಯಿಂದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಭೂಮಿ ಒದಗಿಸುವ ಯೋಜನೆ ಬಗ್ಗೆ ಎರಡು ಬಾರಿ ಮನವಿ ಮಾಡಲಾಗಿದೆ ಎಂದು ಶಾಸಕ ಕೆ.ಷಡಕ್ಷರಿ, ಸಚಿವರ ಗಮನ ಸೆಳೆದಾಗ. ಕೇವಲ ಕಟ್ಟಡ ಕಟ್ಟಿದರೆ ಸಾಲದು, ಅಗತ್ಯ ಸಿಬ್ಬಂದಿ ಲಭ್ಯತೆ ಬಗ್ಗೆ ಗಮನಹರಿಸಬೇಕಾಗುತ್ತದೆ. ಉಪ ವಿಭಾಗಮಟ್ಟದಲ್ಲಿ ಪಿಪಿಪಿ (ಪ್ರೆವೇಟ್​ ಪಬ್ಲಿಕ್​ ಪಾರ್ಟ್​ನರ್​ಶಿಪ್​)ಅಡಿ ತಾಲೂಕಿನಲ್ಲಿ ಮೆಡಿಕಲ್​ ಕಾಲೇಜು ತೆರೆಯಲು ಸಹಮತ ವ್ಯಕ್ತಪಡಿಸಿ ಅಗತ್ಯ ಕಡತಗಳನ್ನು ಸಲ್ಲಿಸುವಂತೆ ಸಚಿವ ದಿನೇಶ್​ ಗುಂಡೂರಾವ್​ ಸೂಚಿಸಿದರು.

ಕಣ್ಣೀರಿಟ್ಟ ದಾದಿಯರು

15 ವರ್ಷಗಳಿಂದ ಎನ್​ಎಚ್​ಎಂ ಯೋಜನೆಯಡಿ ಶುಶ್ರೂಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿವರೆಗೂ ಸಂಬಳ ಹೆಚ್ಚಿಸಿಲ್ಲ, ಕಾಯಮಾತಿ ಆಗಿಲ್ಲ. 5 ವರ್ಷಕ್ಕೊಮ್ಮೆ ಕೇವಲ 5 ಸಾವಿರ ರೂ. ಸಂಬಳ ಹೆಚ್ಚಿಸಲಾಗುತ್ತಿದೆ. ಹಲವು ಬಾರಿ ಪ್ರತಿಭಟನೆ ಮಾಡಿದರೂ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಅವಲತ್ತುಕೊಂಡರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಸಚಿವರು, ಈ ಯೋಜನೆಯಡಿ ಶೇ.60 ಪಾಲು ಕೇಂದ್ರ ಸರ್ಕಾರ ಕೊಡಬೇಕು. ಉಳಿಕೆ ಶೇ.40 ಪಾಲು ರಾಜ್ಯ ಸರ್ಕಾರ ಭರಿಸುತ್ತದೆ. ಕೇಂದ್ರದ ಸಹಕಾರ ಮುಖ್ಯ ಎಂದು ಜಾರಿಕೊಂಡರು.

ಚೌಕಾಶಿ ಬುದ್ಧಿ ತೋರಿದರೇ?

ಕಣ್ಣಿನ ವಿಭಾಗಕ್ಕೆ, ಅತ್ಯವಶ್ಯವಿರುವ ಸುಧಾರಿತ ಸಲಕರಣೆ ಮತ್ತು ಹೆಚ್ಚು ಸಾಮರ್ಥ್ಯದ ಕ್ಷ&ಕಿರಣ ಯಂತ್ರ ಖರೀದಿಗೆ ಸಂಬಂಧಿಸಿದಂತೆ ಅಸಲಿಗೆ ಕಾರ್ಯಸಾಧುವಲ್ಲದ ಮತ್ತು ಮಾರ್ಗಸೂಚಿ ಇಲ್ಲದಿದ್ದರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಗ್ರಹವಾಗಿರುವ ಎಬಿಎಆರ್​ಕೆ (ಆಯುಷ್ಮಾನ್​ ಭಾರತ್​ ಆರೋಗ್ಯ ಕರ್ನಾಟಕ) ನಿಧಿಯ 2.80 ಕೋಟಿ ರೂಪಾಯಿಯಿಂದ ತುರ್ತು ಸಲಕರಣೆಗಳನ್ನು ಖರೀದಿಸುವಂತೆ ಸಚಿವರು ಸೂಚಿಸಿದ್ದು, ಚೌಕಾಶಿ ಬುದ್ಧಿ ತೋರುವಂತಿತ್ತು. ಎಅರ್​ಎಸ್​ ನಿಧಿಯಲ್ಲಿ ಸೆಕ್ಯೂರಿಟಿ ನಿಯೋಜನೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಮೊದಲೇ ಸಿಬ್ಬಂದಿ ಸಮಸ್ಯೆ ಎದುರಿಸುತ್ತಿರುವ ಪೊಲೀಸ್​ ಇಲಾಖೆಯಿಂದ ಪೊಲೀಸ್​ ಔಟ್​ಪೋಸ್ಟ್​ ನಿರ್ಮಿಸುವಂತೆ ಸಚಿವರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net