

ಜು.14, 15ರಂದು ಕೃಷ್ಣಮೂರ್ತಿಪುರಂನ ಕಾಂತರಾಜ ರಸ್ತೆಯ ಶ್ರೀರಾಮಮಂದಿರದಲ್ಲಿ ರೇಖೀ ಚಿಕಿತ್ಸೆ ಬಗ್ಗೆ ಉಚಿತವಾಗಿ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೇಖೀ ಚಿಕಿತ್ಸಕಿ ಎನ್.ವಿಜಯಲಕ್ಷ್ಮೀ ತಿಳಿಸಿದರು.
ಎರಡೂ ದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಕಾರ್ಯಕ್ರಮ ನಡೆಯಲಿದೆ. ವಿವಿಧ ಔಷಧಿ ಸೇವಿಸಿದರೂ ಅವು ಕೆಲವೊಮ್ಮೆ ಸ್ಪಂದಿಸುವುದಿಲ್ಲ. ಅಲ್ಲದೆ, ಕಾಯಿಲೆ ಬಂದ ಮೇಲೆ ವೈದ್ಯರ ಬಳಿ ಹೋಗುವುದಕ್ಕಿಂತಲೂ ರೇಖೀ ಚಿಕಿತ್ಸೆಯಿಂದ ಕಾಯಿಲೆ ಬಾರದಂತೆಯೇ ನೋಡಿಕೊಳ್ಳಬಹುದಾದ ಪರಿಣಾಮವಿದೆ. ಈ ಚಿಕಿತ್ಸೆಯಿಂದ ಸಾವಿರಾರು ರೋಗಿಗಳ ಆರ್ಥರೈಟಿಸ್, ಮಧುಮೇಹ, ದೇಹದ ವಿವಿಧ ನೋವು ಇನ್ನಿತರ ಸಮಸ್ಯೆ ಬಗೆಹರಿಸಿರುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.