ಎಐಟಿಡಬ್ಲುಪಿ ಭಾರತ ತಂಡಕ್ಕೆ ರೆಹಾನ್​ ನದಾಫ್​ ಆಯ್ಕೆ

18 vikram 9 (Rehan Nadaf)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಾಸ್ಟರ್​ ರೆಹಾನ್​ ಮಲಿಕ್​ ನದಾಫ್​ (60 ಕೆಜಿ ಬಾಲಕರು, ಅಲಿಶ್​ ಬೆಲ್ಟ್​ ರೆಸ್ಲಿಂಗ್​) ರಷ್ಯಾದ ಯಾಕುಟಿಯಾದ ನಡೆಯಲಿರುವ 8ನೇ ಏಷ್ಯಾದ ಮಕ್ಕಳ ಅಂತರರಾಷ್ಟ್ರೀಯ ಕ್ರೀಡಾಕೂಟ 2024ರಲ್ಲಿ ಭಾಗವಹಿಸಲು ಎಐಟಿಡಬ್ಲುಪಿ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ರೆಹಾನ್​ ಜತೆಗೆ ತಂತಿ ದೆಬಾಂಗನ್​, ಕ್ರಿಶ್​ ಜೆತೆನ್​, ಯುಗಾಮ್​, ತೇಜಸ್​ ಸಹ ತಂಡದಲ್ಲಿದ್ದಾರೆ. ಕ್ರೀಡಾಕೂಟವನ್ನು ಜೂ. 25 ರಿಂದ ಜು. 7ರಂದು ರಷ್ಯಾದ ಒಕ್ಕೂಟದ ಕ್ರೀಡಾ ಸಚಿವಾಲಯ, ಸಖಾ ಗಣರಾಜ್ಯದ ಸರ್ಕಾರದಿಂದ ಆಯೋಜಿಸಿದೆ. ರಷ್ಯಾದ (ಯಾಕುಟಿಯಾ) ಒಲಿಂಪಿಕ್​ ಸಮಿತಿ ಮತ್ತು ಚಿಲ್ಡನ್​ ಆಫ್​ ಏಷ್ಯಾ ಇಂಟರ್​ ನ್ಯಾಷನಲ್​ ಬೆಂಬಲದೊಂದಿಗೆ ಸಮಿತಿ, ವರ್ಲ್ಡ್​ ಅಲಿಶ್​ ಫೆಡರೇಶನ್​ ಅನುಮತಿಯೊಂದಿಗೆ ಸ್ಪರ್ಧೆಗಳು ನಡೆಯಲಿವೆ.
ಭಾರತೀಯ ತಂಡ ಮೂರು ಸಾಂಪ್ರದಾಯಿಕ ಕುಸ್ತಿ ಶೈಲಿಗಳಲ್ಲಿ ಅಲಿಶ್​ ಬೆಲ್ಟ್​ ರೆಸ್ಲಿಂಗ್​, ಮಾಸ್​- ರೆಸ್ಲಿಂಗ್​ ಮತ್ತು ಕಾಪ್ಸಗಾಯ್​ ರೆಸ್ಲಿಂಗ್​ನಲ್ಲಿ ಭಾಗವಹಿಸಲಿದೆ ಎಂದು ಎಐಟಿಡಬ್ಲುಪಿ ಅಧ್ಯಕ್ಷ ಒಮರ್​ ಮುಕ್ತರ ತಾಂಬೊಳಿ ತಿಳಿಸಿದ್ದಾರೆ. ಭಾರತ ತಂಡಕ್ಕೆ ಆಯ್ಕೆಯಾದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಜಯಗಳಿಸಿ ದೇಶದ ಕೀತಿ೯ ಹೆಚ್ಚಿಸಲಿ ಎಂದು ಧಾರವಾಡ ಅಂಜುಮನ್​ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್​ ತಮಾಟಗಾರ ಹಾಗೂ ಸದಸ್ಯರು ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net