ರಾಮಕೃಷ್ಣ ಪಪೂ ಕಾಲೇಜಿನಲ್ಲಿ ಪುನಶ್ಚೇತನ ಶಿಬಿರ

Rehabilitation camp at Ramakrishna Papu College
Published on

ವಿಜಯಪುರ: ಇಲ್ಲಿನ ಶಾಂತವೀರ ನಗರದ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮತ್ತು ಶನಿವಾರ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಎಲ್ಲ ಸರ್ಕಾರಿ ಕಾಲೇಜುಗಳ ಗಣಿತ ಉಪನ್ಯಾಸಕರ ಎರಡು ದಿನಗಳ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಪುನಶ್ಚೇತನ ಶಿಬಿರ ನಡೆಯಿತು.

ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಶಿಬಿರ ಉದ್ಘಾಟಿಸಿದರು. ಉಪನ್ಯಾಸಕರಾದ ಎಸ್​.ಆರ್​.ಬೆನಕಟ್ಟಿ, ಆರ್​.ವಿ. ಮುರಗೋಡ ಹಾಗೂ ಬಸವಪ್ರಭು ಗಬಸಾವಳಗಿ ಉಪನ್ಯಾಸ ನೀಡಿ, ಹೆಚ್ಚಿನ ಅಂಕಗಳಿಸಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಎರಡು ಜಿಲ್ಲೆಗಳ 30 ಕ್ಕೂ ಹೆಚ್ಚು ಗಣಿತ ಉಪನ್ಯಾಸಕರು ಭಾಗವಹಿಸಿದ್ದರು.

ರಾಮಕೃಷ್ಣ ಪ.ಪೂ. ಕಾಲೇಜಿನ ಆಡಳಿತಾಧಿಕಾರಿ ದಿಲೀಪಕುಮಾರ ಪೂಜಾರಿ, ಪ್ರಾಚಾರ್ಯ ಮಹೇಶ್ವರಪ್ಪ ಡಿ., ಸಂಯೋಜಕ ಗಿರೀಶ ಬಿರಾದಾರ, ಶಿವಲೀಲಾ ಪೂಜಾರಿ, ಸೂರಜ್​ ಬೆಳಗಲಿ ಮತ್ತಿತರರಿದ್ದರು. ಸ್ವರ್ಧಿನಿ ಕುಲಕರ್ಣಿ ಪ್ರಾರ್ಥಿಸಿದರು. ಶೃತಿ ಸೋನಾರ ಸ್ವಾಗತಿಸಿದರು. ಸಂಜೀವಿನಿ ನಿರೂಪಿಸಿದರು. ಸಂಗೀತಾ ತಾಳಿಕೋಟೆ ವಂದಿಸಿದರು.

ಫೋಟೋ : ಎಂಎಂ 19&6

**

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net