

ಕಮತಗಿ: ಸ್ಪರ್ಧಾತ್ಮಕ ಸ್ಪರ್ಧೆಯಲ್ಲಿ ನಿಯಮಿತವಾಗಿ ಅಧ್ಯಯನಲ್ಲಿ ತೊಡಗಿಕೊಂಡು ಬದುಕಿನಲ್ಲಿ ಇಟ್ಟುಕೊಂಡ ಗುರಿ ಸಾಧಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕೆಂದು ಶಿಕ್ಷಕ ಸಾಹಿತಿ ಮುತ್ತು ವಡ್ಡರ ಹೇಳಿದರು.
ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದಡಿ ಶನಿವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ತರಬೇತಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಪರ್ಧೆಯು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ಅನಿವಾರ್ಯವಾಗಿ ಸ್ಪರ್ಧೆಗೆ ನಮ್ಮನ್ನು ಒಗ್ಗೂಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಆಲೋಚನೆ ಹೊಂದಬೇಕು ಎಂದರು.
ಪ್ರಾಚಾರ್ಯ ಪಿ.ಎಂ. ಗುರುವಿನಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಉದ್ದೇಶದಿಂದ ಪ್ರತಿ ಶನಿವಾರ ಸ್ಪರ್ಧಾತ್ಮಕ ತರಬೇತಿ ನಡೆಸಲಾಗುವುದು ಎಂದು ತಿಳಿಸಿದರು.
ಉಪನ್ಯಾಸಕ ಎ.ಎನ್. ಪುರಾಣಿಮಠ, ವೈ.ಎಚ್. ಕಂಬಳಿ, ಎಂ.ಎಂ. ಪಾಟೀಲ, ಎನ್.ಪಿ. ಹುಲಮನಿಗೌಡ್ರ, ರೋಹಿನಿ ಚಿತ್ತವಾಡಗಿ, ರಾಜೇಶ್ವರಿ ಹಾದಿಮನಿ, ಸಿ.ಎನ್. ಭಜಂತ್ರಿ ಇತರರಿದ್ದರು. ಜೆ.ಎಸ್. ಬಾದವಾಡಗಿ ಸ್ವಾಗತಿಸಿದರು. ಕೆ.ಜಿ. ಅಂಗಡಿ ನಿರೂಪಿಸಿ, ವಂದಿಸಿದರು.