ಆರೋಗ್ಯ ರಕ್ಷಣೆಗೆ ನಿಯಮಿತವಾಗಿ ತಪಾಸಣೆ ಅಗತ್ಯ

Regular inspection is required for health care
ಜಮಖಂಡಿ ನಗರದ ಸಾನಿಯಾ ಮೆಡಿಕಲ್, ನ್ಯಾಮಗೌಡ ಪಾಲಿಕ್ಲಿನಿಕ್, ಬಿಎಲ್‌ಡಿಇ ನಸಿರ್ಂಗ್ ಕಾಲೇಜ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷದ ವಿತರಣೆ ಕಾರ್ಯಕ್ರಮವನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ ಉದ್ಘಾಟಿಸಿದರು. ಪರಮಾನಂದ ಗವರೋಜಿ, ಮೀರಾಸಾಬ ಒಂಟಮೂರಿ, ಮಲ್ಲು ಗಣಾಚಾರಿ, ಅಕ್ಬರ ಜಮಾದಾರ, ಅಯ್ಯೂಬ್‌ಧನ್ನೂರ ಮತ್ತಿತರರಿದ್ದಾರೆ.
Published on

ಜಮಖಂಡಿ: ರೋಗಕ್ಕೆ ಚಿಕಿತ್ಸೆ ಪಡೆಯಲು ಮಾತ್ರ ಆಸ್ಪತ್ರೆಗೆ ತೆರಳದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸೂಚನೆ ಪಾಲಿಸಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದರು.

ನಗರದ ಸಾನಿಯಾ ಮೆಡಿಕಲ್, ನ್ಯಾಮಗೌಡ ಪಾಲಿಕ್ಲಿನಿಕ್, ಬಿಎಲ್‌ಡಿಇ ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದ್ದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದರು.

400ಕ್ಕೂ ಅಧಿಕ ರೋಗಿಗಳ ಆರೋಗ್ಯ ತಪಾಸಣೆಯನ್ನು ವೈದ್ಯರಾದ ಡಾ. ಶ್ರೀಶೈಲ ಅಂಜುಟಗಿ, ಡಾ. ವಿಶ್ವನಾಥ ಆಲಮೇಲ, ಡಾ. ಪವನ ಬಳ್ಳೂರ, ಡಾ. ಸಂಗಮೇಶ ನ್ಯಾಮಗೌಡ, ಡಾ.ಶಿವಲೀಲಾ ನ್ಯಾಮಗೌಡ ನಡೆಸಿದರು. ಸಾನಿಯಾ ಮೆಡಿಕಲ್ ವತಿಯಿಂದ ತಪಾಸಣೆಗೆ ಬಂದ ರೋಗಿಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಮೀರಾಸಾಬ ಒಂಟಮೂರಿ, ಮಲ್ಲು ಗಣಾಚಾರಿ, ಅಕ್ಬರ ಜಮಾದಾರ, ಅಯ್ಯೂಬ್‌ಧನ್ನೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net