ನಿಯಮಿತ ಆರೋಗ್ಯ ತಪಾಸಣೆ: ವೈ.ಯೋಗೀಶ್ ರಾವ್ ಕಿವಿಮಾತು

Kin_Shibira
Published on

ಕಿನ್ನಿಗೋಳಿ: ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆ ವಾಡುವುದು ಅಗತ್ಯ. ಸಂಘ- ಸಂಸ್ಥೆಗಳು ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳುವಾಗ ಅದರ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದು ಪ್ರಮುಖರಾದ ವೈ.ಯೋಗೀಶ್ ರಾವ್ ಹೇಳಿದರು.

ಏಳಿಂಜೆ ಶ್ರೀದೇವಿ ಯುವತಿ ಮತ್ತು ಮಹಿಳಾ ಮಂಡಳಿ, ಮುಕ್ಕ ಶ್ರೀನಿವಾಸ ಆಸ್ಪತ್ರೆ ಸಹಯೋಗದಲ್ಲಿ ಕಿನ್ನಿಗೋಳಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ವೈದ್ಯಕೀಯ ಉಚಿತ ಶಿಬಿರ ಮತ್ತು ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಮಾತನಾಡಿದರು.

ಮುಕ್ಕ ಶ್ರೀನಿವಾಸ ಆಸ್ಪತ್ರೆ ಮುಖ್ಯಸ್ಥ ಡಾ.ಉದಯ ಕುಮಾರ್, ಏಳಿಂಜೆ ದೇವಸ್ಥಾನದ ಅರ್ಚಕ ಗಣೇಶ್ ಭಟ್, ಸುಧಾಕರ ಶೆಟ್ಟಿ, ಅಂಚೆ ಇಲಾಖೆಯ ಸಹಾಯಕ ಅಂಚೆ ಅಧೀಕ್ಷಕ ಸಿ.ಪಿ.ಹರೀಶ್, ಪೋಸ್ಟ್ ವಾಸ್ಟರ್ ಮನೋಜ್ ಕುವಾರ್, ವತ್ಸಲಾ ರಾವ್, ಜಯಲಕ್ಷ್ಮೀ, ನವಚೇತನ ಯುವಕ ಮಂಡಲದ ಕಾರ್ಯದರ್ಶಿ ಹರೀಶ್ ಶೆಟ್ಟಿ ತಾಮಣಿಗುತ್ತು ಮತ್ತಿತರರಿದ್ದರು.

ಮಹಿಳಾ ಮತ್ತು ಯುವತಿ ಮಂಡಳದ ಅಧ್ಯಕ್ಷೆ ನಿಶಿತಾ ಎಚ್.ಶೆಟ್ಟಿ ಸ್ವಾಗತಿಸಿದರು. ಸವಿತಾ ನಿರೂಪಿಸಿದರು. ಉಮಾವತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net