ಪದವೀಧರರ ನೋಂದಣಿ ಕಡ್ಡಾಯ

Published on

ತಿಪಟೂರು: ಪದವೀಧರ ೇತ್ರದ ಚುನಾವಣೆ ಹತ್ತಿರ ಬಂದರೂ, ಪದವೀಧರರ ನೋಂದಣಿ ಪ್ರಕ್ರಿಯೆ ಕುಂಟುತ್ತಾ ಸಾಗಿರುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂದ ಮಾಜಿ ಅಧ್ಯಕ್ಷ ತೀರ್ಥಕುಮಾರ್​ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗ್ನೇಯ ಪದವೀಧರ ೇತ್ರಕ್ಕೆ ಚುನಾವಣೆ ನಿಗದಿಯಾಗಿದ್ದರೂ ಎಲ್ಲೆಡೆ ನೀರಸ ಪ್ರತಿಕ್ರಿಯೆ ಕಂಡುಬರುತ್ತಿದೆ. ತಾಲೂಕಿನ ಅನೇಕ ಹಳ್ಳಿಗಳಲ್ಲಿ ಈಗಲೂ 15ರಿಂದ 20 ಜನರು ಪದವೀಧರು ನೋಂದಣಿ ಮಾಡಿಸಿಲ್ಲ. ಒಟ್ಟಾರೆ ತಾಲೂಕಿನಲ್ಲಿ ಶೇ.50 ಪದವೀಧರರು ನೋಂದಣಿ ಮಾಡಿಸಿಲ್ಲ ಎನ್ನಲಾಗಿದೆ. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಇಲ್ಲದಿದ್ದರೆ ಪದವೀಧರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ, ಬ್ಯಾಂಕುಗಳಿಂದ ಸಿಗುವ ಕೌಶಲಾಭಿವೃದ್ಧಿ ಸಾಲ ಸೌಲಭ್ಯಗಳ ಬಗ್ಗೆ ಪ್ರಶ್ನಿಸುವವರೇ ಇಲ್ಲದಂತಾಗಿ ಅವಕಾಶ ವಂಚಿತರಾಗಬೇಕಾಗುತ್ತೆ. ಕೆಲವರು ಒಮ್ಮೆ ನೋಂದಣಿ ಮಾಡಿಸಿದರೆ ಮುಗಿಯಿತು ಎಂಬ ಭಾವನೆಯಲ್ಲಿದ್ದಾರೆ. ಆದರೆ ಚುನಾವಣಾ ಆಯೋಗದ ನಿಯಮಾನುಸಾರ ಪ್ರತಿ ಚುನಾವಣೆ ಸಂದರ್ಭದಲ್ಲೂ ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಪದವೀಧರರು ಸ್ವಪ್ರೇರಿತರಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಚುನಾವಣೆ ಶಾಖೆಯಲ್ಲಿ ನೋಂದಣಿ ಮಾಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net