ಉತ್ತಮ ವೈವಾಹಿಕ ಸಂಬಂಧಕ್ಕೆ ಸಹಾಯ : ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಆಶಯ

New Project (13)
Published on

ಹಳೆಯಂಗಡಿ: ವಧು-ವರರ ನೋಂದಣಿ ಮತ್ತು ಅನ್ವೇಷಣೆ ಮೂಲಕ ಸಮಾಜ ಬಾಂಧವರಿಗೆ ಉತ್ತಮ ವೈವಾಹಿಕ ಸಂಬಂಧ ರೂಪಿಸುವಲ್ಲಿ ಸಂಘವು ರಾಜ್ಯ ಮತ್ತು ಹೊರರಾಜ್ಯ ಸಂಘಗಳ ಸಹಕಾರದಲ್ಲಿ ಸಹಾಯ ನೀಡುತ್ತಿದೆ ಎಂದು ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಹೇಳಿದರು.

ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘ ಮಹಿಳಾ ವೇದಿಕೆ, ಯುವ ವೇದಿಕೆ, ದೇವಾಡಿಗ ಸೇವಾ ಟ್ರಸ್ಟ್ ಆಶ್ರಯದಲ್ಲಿ ದೇವಾಡಿಗ ವಧು-ವರರ ವೇದಿಕೆಯ ಸಹಯೋಗದಲ್ಲಿ ಸಂಘದ ಸಭಾಭವನದಲ್ಲಿ ವಧು-ವರರ ನೋಂದಣಿ ಮತ್ತು ಅನ್ವೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘದ ಕಟ್ಟಡ ಸಮಿತಿ ಅಧ್ಯಕ್ಷರಾದ ರಮಾ ದೇವಿ ಮತ್ತು ಪರಮೇಶ್ವರ್ ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಅಧ್ಯಕ್ಷತೆ ವಹಿಸಿದ್ದರು.

ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್.ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ಅಶೋಕ್ ಎ.ದೇವಾಡಿಗ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಯಾದವ ದೇವಾಡಿಗ, ಮಹಿಳಾ ವೇದಿಕೆ ಅಧ್ಯಕ್ಷರಾದ ವಿಜಯಲಕ್ಷ್ಮೀ ಜನಾರ್ದನ, ಟ್ರಸ್ಟ್ ಅಧ್ಯಕ್ಷ ರಮೇಶ್ ಕುಮಾರ್ ತೋಕೂರು, ಯುವ ವೇದಿಕೆ ಅಧ್ಯಕ್ಷ ಗಣೇಶ್ ದೇವಾಡಿಗ ಪಂಜ, ದೇವಾಡಿಗ ವಧು-ವರರ ವೇದಿಕೆಯ ಸದಸ್ಯರಾದ ಜೀವನ್ ಪ್ರಕಾಶ್, ಅಶೋಕ್ ಪಾವಂಜೆ, ಶೋಭಾ ಸೋಮನಾಥ್, ಶೈಲಜಾ ವಾಮನ್, ವೈಶಾಲಿ ಆನಂದ್ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯ ಸುರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸುಮಾರು 100ಕ್ಕಿಂತಲೂ ಅಧಿಕ ಹುಡುಗರು 25ಕ್ಕಿಂತಲೂ ಹೆಚ್ಚು ವಧುಗಳು ಹಾಗೂ ಅವರ ಪಾಲಕರು ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ರಾಮದಾಸ ಪಾವಂಜೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net