

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ 1,39,424 ಜನ ರೈತರು ತಮ್ಮ ಕಂತು ಪಾವತಿಸಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತ್ರೊಳ್ಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ವಿವಿಧ ತಾಲೂಕುಗಳ 1,39,424 ರೈತರು ತಮ್ಮ 136229.699 ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ.
ಮುಂಗಾರು ಹಂಗಾಮಿನ ಉದ್ದಿನ ಬೆಳೆಗೆ 4110 ರೈತರು, ಹತ್ತಿ ಬೆಳೆಗೆ 9372 ರೈತರು, ಹೆಸರು ಬೆಳೆಗೆ 53,616 ರೈತರು, ಶೇಂಗಾ ಬೆಳೆಗೆ 9392 ರೈತರು, ಗೋವಿನ ಜೋಳ ಬೆಳೆಗೆ 30167 ರೈತರು, ಈರುಳ್ಳಿ ಬೆಳೆಗೆ 3125 ರೈತರು, ಭತ್ತದ ಬೆಳೆಗೆ 8919 ರೈತರು, ಆಲೂಗಡ್ಡೆ ಬೆಳೆಗೆ 133 ರೈತರು, ಕೆಂಪು ಮೆಣಸಿಕಾಯಿ ಬೆಳೆಗೆ 8093 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಸಾವೆ ಬೆಳೆಗೆ 10 ರೈತರು, ಜೋಳದ ಬೆಳೆಗೆ 22 ರೈತರು, ಟೊಮೆಟೊ ಬೆಳೆಗೆ 358 ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.