ವಾಹನಗಳಿಗೆ ನೋಂದಣಿ ಕಡ್ಡಾಯ: ಪ್ರಾದೇಶಿಕ ಸಾರಿಗೆ ಅಧಿಕಾರಿ ಸೂಚನೆ

Vehicles
Published on

ಮಂಡ್ಯ: ಜಿಲ್ಲಾ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾದ ಮೋಟಾರು ಕಾರು, ದ್ವಿಚಕ್ರ ಮತ್ತು ಸಾರಿಗೆ ವಾಹನಗಳು(ಶಾಲಾ ಮತ್ತು ಕಾಲೇಜು ವಾಹನಗಳನ್ನು ಒಳಗೊಂಡಂತೆ) ನೋಂದಣಿ ಮತ್ತು ಅರ್ಹತಾ ಪತ್ರದ ನವೀಕರಣ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಅರ್ಹತಾ ಪತ್ರದ ನೋಂದಣಿ ನವೀಕರಣಗೊಳ್ಳದ ವಾಹನ ಬಳಕೆ ಮಾಡುವಾಗ ಅಪಘಾತವಾದರೆ ವಿಮೆ ಸೌಲಭ್ಯ ಸಿಗುವುದಿಲ್ಲ. 2024ರ ಮೇ 1ರಿಂದ ಒಂದು ತಿಂಗಳ ವಿಳಂಬಕ್ಕೆ ದ್ವಿಚಕ್ರ ವಾಹನಕ್ಕೆ 300 ರೂ ಮತ್ತು ಮೋಟಾರು ಕಾರುಗಳಿಗೆ 500 ರೂ ದಂಡ ವಿಧಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net