ಸೆ.22ಕ್ಕೆ ಅಸಂಘಟಿತ ಗ್ಯಾರೇಜು ಕಾರ್ಮಿಕರ ನೋಂದಣಿ ಶಿಬಿರ

udp-shibira
Published on

ಉಡುಪಿ: ಜಿಲ್ಲಾ ಗ್ಯಾರೇಜ್​ ಮಾಲಕರ ಸಂದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಸಂಘಟಿತ ಗ್ಯಾರೇಜು ಕಾರ್ಮಿಕರ ನೋಂದಣಿ ಶಿಬಿರ ಸೆ.22 ರಂದು ಬೆಳಗ್ಗೆ 8:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್​ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ನಗರಸಭಾ ಸದಸ್ಯ ಮಂಜುನಾಥ್​ ಮಣಿಪಾಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಡುಪಿ ಶಾಸಕ ಯಶ್ಪಾಲ್​ ಸುವರ್ಣ ಶಿಬಿರವನ್ನು ಉದ್ಘಾಟಿಸಿದ್ದಾರೆ. ಮಂಡಳಿ ಸ್ಥಾಪನೆ ಆಗುವಂತೆ ವಿಶೇಷ ಪ್ರಯತ್ನ ಮಾಡಿದ ಮೂಡಬಿದ್ರೆ ಶಾಸಕ ಉಮಾನಾಥ್​ ಕೋಟ್ಯಾನ್​ ಅವರನ್ನು ಗೌರವಿಸಲಾಗುವುದು ಎಂದರು. ರಾಜ್ಯ ಸರ್ಕಾರವು ಸಾರಿಗೆ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ಸ್ಥಾಪನೆ ಮಾಡಿದೆ. ಗ್ಯಾರೇಜ್​ ಕಾರ್ಮಿಕರನ್ನು ಗುರುತಿಸಿ ಸದಸ್ಯತ್ವ ನೀಡುವ ನಿಟ್ಟಿನಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯ ಸೂಚನೆಯಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸುಮಾರು 3,000 ಗ್ಯಾರೇಜು ಮಾಲಕರು ಹಾಗೂ ಕಾರ್ಮಿಕರು ಪ್ರಸ್ತುತ ಕೆಲಸ ಮಾಡುತ್ತಿದ್ದು, ಆಟೋಮೊಬೈಲ್​ ಕ್ಷೇತ್ರದಲ್ಲಿ ಪ್ರಸ್ತುತ ಕೆಲಸ ಮಾಡುವ ಎಲ್ಲಾ ಗ್ಯಾರೇಜು ಮಾಲಕರು ಮತ್ತು ಕಾರ್ಮಿಕರನ್ನು ನೋಂದಾಯಿಸುವ ಉದ್ದೇಶದಿಂದ ಈ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.

ಮಾಲೀಕರು ಹಾಗು ಕಾರ್ಮಿಕರು ನೊಂದಾವಣೆಗೆ ಬರುವಾಗ ಆಧಾರ್​ ಕಾರ್ಡ್​, ರೇಶನ್​ ಕಾರ್ಡ್​, ಭಾವಚಿತ್ರ, ಪಾನ್​ ಕಾರ್ಡ್​, ಬ್ಯಾಂಗ್​ ಪಾಸ್​ ಪುಸ್ತಕ ಮೊದಲಾದ ಅಗತ್ಯ ದಾಖಲೆಗಳನ್ನು ತರಬೇಕು. ಅರ್ಜಿ ಫಾರಂ ಪ್ರತಿಯನ್ನು ಭರ್ತಿ ಮಾಡಲು ಶಿಬಿರದಲ್ಲಿ ಮಾಹಿತಿ ನೀಡಲಾಗುವುದು. ಯಾವುದೇ ನೊಂದಾವಣಿ ಶುಲ್ಕ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಸಂಘಟನೆಯ ಅಧ್ಯಕ್ಷ ರೋಶನ್​ ಕರ್ಕಡ, ಪ್ರಮುಖರಾದ ಸಂತೋಷ್​ ಕುಮಾರ್​, ವಿಲ್ಸನ್​ ಅಂಚನ್​, ಉದಯ್​ ಕಿರಣ್​, ನಾರಾಯಣ ಆಚಾರ್​ ಕುಂದಾಪುರ, ಕೆ.ಪ್ರಭಾಕರ್​, ನವೀನ್​ ಉದ್ಯಾವರ, ರಾಜೇಶ್​ ಜತ್ತನ್​, ಮಹೇಶ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net