

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆ ಸಹಯೋಗದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿAದ ಏಪ್ರಿಲ್ ಮೊದಲ ವಾರದಲ್ಲಿ ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಆನ್‌ಲೈನ್ ಮತ್ತು ಕ್ಯೂಆರ್ ಕೋಡ್ ಮೂಲಕ ನೋಂದಣಿ ಆರಂಭವಾಗಿದೆ. ಕೆಜಿಐಡಿ ಸಂಖ್ಯೆ ಹೊಂದಿರುವ ರಾಜ್ಯ ಸರ್ಕಾರಿ ನೌಕರರಾಗಿರಬೇಕು. ಕ್ರೀಡಾ ತರಬೇತುದಾರರು, ಕ್ರೀಡಾ ಕೋಟಾದಲ್ಲಿ ನೇಮಕಾತಿ ಹೊಂದಿದವರು, ಪ್ಯಾರಾಮಿಲಿಟರಿ, ಪೊಲೀಸ್, ಸಿಆರ್‌ಪಿಎಫ್, ಅಗ್ನಿಶಾಮಕ ದಳ ಸೇರಿ ಸಮವಸ್ತ್ರಧಾರಿತ ನೌಕರರು ಹಾಗೂ ದಿನಗೂಲಿ ನೌಕರರು, ನಿಗಮ ಮಂಡಳಿ, ಸ್ವಾಯತ್ತ ಸಂಸ್ಥೆಗಳ ನೌಕರರು, ಬ್ಯಾಂಕ್ ನೌಕರರು ಭಾಗವಹಿಸಲು ಅರ್ಹರಿರುವುದಿಲ್ಲ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ನೋಂದಣಿ ಮತ್ತು ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಅಥವಾ ಸಂಘದ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.