ನೋಂದಾಯಿತ ಕಾರ್ಮಿಕರಿಗೆ ನಿರಂತರ ಕೆಲಸ

13 KRT SHARNAPPA 02
ಕಾರಟಗಿ ತಾಲೂಕಿನ ಬರಗೂರು ಗ್ರಾಪಂ ವ್ಯಾಪ್ತಿಯ ಅರುಣೋದಯ ತಾಂಡದ ನರೇಗಾ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಅಭಿಯಾನ ಹಾಗೂ ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮ ನಡೆಯಿತು. ಗ್ರಾಪಂ ಬಿಎಫ್ಟಿ ವೀರೇಶ, ಗ್ರಾಮ ಕಾಯಕ ಮಿತ್ರರಾದ ರತ್ನಮ್ಮ, ಕಾಯಕ ಬಂಧುಗಳಾದ ರವಿಚಂದ್ರ, ಸಂದೀಪ್, ಸುನೀಲ್, ರಾಮು, ಅನ್ನಪೂರ್ಣ ಇತರರಿದ್ದರು.
Published on

ಕಾರಟಗಿ: ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೂಲಿಕಾರರಿಗೆ ಕೆಲಸ ನೀಡುವ ಉದ್ದೇಶದಿಂದ ‘ದುಡಿಯೋಣ ಬಾ’ ಹಾಗೂ ಸ್ತ್ರೀ ಚೇತನ ಅಭಿಯಾನ ಪ್ರಾರಂಭಿಸಲಾಗಿದ್ದು, ಕೂಲಿಕಾರರು ಸದುಪಯೋಗಪಡಿಸಿಕೊಳ್ಳಬೇಕೆಂದು ಗ್ರಾಪಂ ಪಿಡಿಒ ಬಸಪ್ಪ ಹೇಳಿದರು.

ತಾಲೂಕಿನ ಬರಗೂರು ಗ್ರಾಪಂ ವ್ಯಾಪ್ತಿಯ ಅರುಣೋದಯ ತಾಂಡಾದ ನರೇಗಾ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಮಾತನಾಡಿ, ಕೂಲಿಕಾರರು ಬೇರೆಡೆ ವಲಸೆ ಹೋಗುವುದನ್ನು ತಪ್ಪಿಸಲು ಈ ಅಭಿಯಾನ ಆರಂಭಿಸಲಾಗಿದೆ. ಯೋಜನೆಯಡಿ ಮಹಿಳೆಯರು, ಅಂಗವಿಕಲರು, ಲಿಂಗತ್ವ ಅಲ್ಪ ಸಂಖ್ಯಾತರು, ದುರ್ಬಲವರ್ಗದವರು ಸೇರಿದಂತೆ ಎಲ್ಲ ನೋಂದಾಯಿತ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲಾಗುತ್ತದೆ ಎಂದರು.

ತಾಪಂ ನರೇಗಾ ಐಇಸಿ ಸಂಯೋಜಕ ಸೋಮನಾಥ ಗೌಡರ್ ಮಾತನಾಡಿ, ನರೇಗಾ ಕೆಲಸಕ್ಕೆ ಬರುವ ಕೂಲಿಕಾರರು ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ಹಾಕಬೇಕು. ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ಪೂರ್ಣ ಕೂಲಿ ಪಡೆಯಬಹುದು. ನರೇಗಾ ಕೂಲಿ 349 ರಿಂದ 370 ಗೆ ಹೆಚ್ಚಳ ವಾಗಿದೆ. ಬೇಸಿಗೆ ಇರುವುದರಿಂದ ಕೆಲಸದಲ್ಲಿ ಶೇ.30 ವಿನಾಯಿತಿಯಿದೆ. ಗ್ರಾಪಂಗೆ ನಮೂನೆ-6 ಸಲ್ಲಿಸಿ ಯೋಜನೆಯ ಸದುಪಯೋಗ ಪಡೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net