

ರಾಯಚೂರು ಹಿಂದುಳಿದ ವರ್ಗಗಳ ಜಾತಿ ಗಣತಿಯು ಸೆ.22 ರಿಂದ ಪ್ರಾರಂಭವಾಗುತ್ತಿದ್ದು,
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಗಾಮಸ್ಥ ಸಮಾಜದಲ್ಲಿ 39 ಉಪ ಪಂಗಡಗಳಿವೆ. ಕೆಲವು ಭಾಗದಲ್ಲಿ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ. ಮಧ್ಯ ಕರ್ನಾಟಕದಲ್ಲಿ ಕಬ್ಬಲಿಗರು, ಬೇಸ್ತರು, ಅಂಬಿಗರು ಎಂದು ಕರೆಯುತ್ತಿದ್ದರೆ, ಕರಾವಳಿ ಪ್ರದೇಶದಲ್ಲಿ ಗಂಗಾಮಸ್ಥರು ಎಂದು ಕರೆಯಲಾಗುತ್ತಿದೆ.
ಕಲ್ಬುರ್ಗಿ, ಬೀದರ, ಯಾದಗಿರಿಯಲ್ಲಿ ಕೋಲಿ ಸಮಾಜ ಎಂದು ಕರೆಯಲಾಗುತ್ತಿದೆ.
ಜಿಲ್ಲೆಯಲ್ಲಿ ಬೇಸ್ತರು, ಕಬ್ಬಲಿಗರು, ಕಬ್ಬೇರ ಎಂದು ಕರೆಯಲಾಗುತ್ತಿದೆ. ಶಾಲಾ ದಾಖಲೆಯಲ್ಲಿರುವ ಜಾತಿಯನ್ನು ನಮೂದಿಸಬೇಕು. ಗಂಗಾಮಸ್ಥ ಕ್ರಿಶ್ಚಿಯನ್ ಎಂದು ಕಲಂನಲ್ಲಿ ನಮೂದಿಸಲಾಗಿದೆ. ಮತಾಂತರಗೊಂಡವರು ಅದೇ ಜಾತಿಯನ್ನು ನಮೂದಿಸಬೇಕಿರುವದರಿಂದ ಅನಗತ್ಯ ಗೊಂದಲಕ್ಕಿಡಾಗದ ಖಚಿತ ಮಾಹಿತಿ ನಮೂದಿಸಬೇಕು. ಗಂಗಾಮಸ್ಥ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ಸರ್ಕಾರ ಮಟ್ಟದಲ್ಲಿದೆ. ಕುರುಬ ಸಮಾಜ ಎಸ್ಟಿಗೆ ಸೇರಿಸಲು ನಮ್ಮದೇನು ವಿರೋಧವಿಲ್ಲ. ಅನೇಕ ಹಿಂದುಳಿದ ವರ್ಗಗಳ ಬೇಡಿಕೆಗಳಿಗೆ ಪ್ರಸ್ತಾವನೆಗಳಿವೆ. ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಶರಣಪ್ಪ, ಕಡಗೋಲ ಆಂಜಿನೇಯ್ಯ, ಕಡಗೋಲ ಶರಣಪ್ಪ, ಹನುಮಂತಪ್ಪ, ಕೆ.ಟಿ. ಶ್ರೀನಿವಾಸ, ಪ್ರಕಾಶ, ರಾಮಚಂದ್ರ ಕಡಗೋಲ ಇದ್ದರು.