

ರಾಯಚೂರು ರಾಜ್ಯದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲಿ ಒಕ್ಕಗಲಿ ಸಮಾಜದವರು ಜಾತಿ ಕಾಲಂನಲ್ಲಿ ಒಕ್ಕಲಿಗ ಹಾಗೂ ಉಪ ಜಾತಿಯಲ್ಲಿ ಕುಡು ಒಕ್ಕಲಿಗ ಹಾಗೂ ಧರ್ಮದ ಕಾಲಂನಲ್ಲಿ ಹಿಂದುವೆಂದು ನೋಂದಣಿ ಮಾಡಿಸಬೇಕೆಂದು ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಅಡಿಟರ್ ನಾಗರಾಜ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವಣ್ಣವರ ಪ್ರೇರಣೆಯಿಂದ ಕೃಷಿಕರಾಗಿ ಜೀವನ ನಡೆಸುತ್ತಿರುವ ಒಕ್ಕಲಿಗ ಸಮಾಜವನ್ನು ಲಿಂಗಾಯತ, ಹಿಂದೂ ಲಿಂಗಾಯತ, ಲಿಂಗಾಯತ ಕುಡು ಒಕ್ಕಲಿಗ, ವೀರಶೈವ ಕುಡು ಒಕ್ಕಲಿಗ ಎಂದು ವಿವಿಧ ಪಂಗಡಗಳಿಂದ ಗುರುತಿಸಲಾಗುತ್ತಿದೆ. ಸಮಾಜಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯವಿಲ್ಲದೇ ಸಮಾಜವನ್ನು ಪ್ರವರ್ಗ 3ಎ ರಲ್ಲಿ ಹಿಂದುಳಿದ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಜಯ ಪ್ರಕಾಶ ಹೆಗಡೆಯವರು ಸೇರಿಸಲಾಗಿದೆ. ಲಿಂಗಾಯತ ಸಮಾಜದವರಲ್ಲ. ಪ್ರತ್ಯೇಕ ಕುಡು ಒಕ್ಕಲಿಗ ಎಂದು ಗಣತಿಯಲ್ಲಿ ಬರೆಯಿಸಬೇಕೆಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಾಣಿಕ್ಯ ಚಿಲ್ಲೂರು, ರವಿ ಗೌಡ ಪೊಲೀಸ್ ಪಾಟೀಲ್, ಗುರುನಾಥ ದೇಸಾಯಿ, ಸಂಗಮೇಶಗೌಡ ಇದ್ದರು.