

ರಾಯಚೂರು ಸೆ.22 ರಿಂದ ಪ್ರಾರಂಭವಾಗುವ ಹಿಂದುಳಿದ ವರ್ಗಗಳ ಜಾತಿ ಗಣತಿಯಲ್ಲಿ ಪಿಂಜಾರ ಸಮೂದಾಯ ಜನರು ಧರ್ಮದ ಕಾಲಂನಲ್ಲಿ ಇಸ್ಲಾಂ, ಜಾತಿ ಕಲಂನಲ್ಲಿ ಪಿಂಜಾರ ಎಂದು ನೋಂದಣಿ ಮಾಡಿಸುವಂತೆ ಪಿಂಜಾರ ನದಾಫ್ ಮನ್ಸೂರಿ ಹಕ್ಕುಗಳ ಸಂಘದ ರಾಜ್ಯಾಧ್ಯಕ್ಷ ಇಮ್ರಾನ್ ಬಡೇಸಾಬ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನದಾಫ್, ಪಿಂಜಾರ ಎಂದೆಲ್ಲ ಕರೆಯಿಸಿಕೊಳ್ಳುವ ಸಮಾಜ ಜನರು ಗಣತಿಯಲ್ಲಿ ಪಿಂಜಾರ ಎಂದು ಬರೆಯಿಸಬೇಕಿದೆ. ಕಲಂ 9 ರಲ್ಲಿ ಪಿಂಜಾರ ಅಥವಾ ನದಾಫ್ ಎಂದು ಬರೆಯಿಸಬೇಕು.ಅನಗತ್ಯ ಗೊಂದಲಗಳಿಗೆ ಅವಕಾಶ ನೀಡಿದೇ ಒಂದೇ ಜಾತಿ ಉಪಪಂಗಡದ ಹೆಸರು ಬರೆಯಿಸಬೇಕೆ ಎಂದರು.
ಈ ಸಂದರ್ಭದಲ್ಲಿ ಹಸನ, ಖಾಸಿಂಸಾಬ್.ಜಾವೀದ್, ಖಾದರಸಾಬ ಇದ್ದರು.