

ರಾಯಚೂರು ಸೆ.22 ರಿಂದ ರಾಜ್ಯದಲ್ಲಿ ಪ್ರಾರಮಭ ವಾಗುವ ಹಿಂದುಳಿದ ವರ್ಗಗಳ ಗಣತಿಯಲ್ಲಿ ಹೂಗಾರ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದೂ ಜಾತಿ ಕಲಂನಲ್ಲಿ ಹೂಗಾರ ಎಂದು ನೋಂದಣಿ ಮಾಡಬೇಕೆಂದು ಅಖಿಲ ಕರ್ನಾಟಕ ಹೂಗಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಹೂಗಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12 ನೇ ಶತಮಾನದಿಂದಲೂ ಬಸವಣನವ ತತ್ವಾದರ್ಶಗಳನು ಪಾಲಿಸಿಕೊಂಡು ಕಾಯಕ ಜೀವಿಗಳಾಗಿ ಜೀವನಮಾಡುತ್ತಿರುವ ಹೂಗಾರ ಸಮೂಜ ಕುಲವೃತ್ತಿ ಹೂವು ಕಟ್ಟವದು, ಪೂಜೆ ಮಾಡುವ ಕೆಲಸ ಮಾಡುತ್ತಾ ಬಂದಿದೆ. ಹೂಗಾರ, ಪೂಜಾರಿ, ಜೀರ, ಗುರುವ, ಪೂಜಾರ, ಪುಲಾರಿ, ಪೂಲ್‌ಮಾಲಿ, ಮಾಲೆಗಾರ, ತಾಂಬೋಳಿ ಎಂದೆಲ್ಲ ವಿವಿಧಡೆ ಕರೆಯಲಾಗುತಿದೆ.
ಗಣತಿಯಲ್ಲಿ ಧರ್ಮ ಕಲಂ 8 ರಲ್ಲಿ ಹಿಂದು ಎಂದು, ಜಾತಿ ಕಲಂನಲ್ಲಿ ಎ-0497 ರಲ್ಲಿ ಕಡ್ಡಾಯವಾಗಿ ಹೂಗಾರ ಎಂದು ನಮೂದಿಸಬೇಕೆಂದರು. ಕುಲಕಸುಬ ಕಾಲಂನಲ್ಲಿ ಹೂಗಾರಿಕೆ, ಪೂಜಾರಿಕೆ ಎಂದು ನಮೂದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ, ಮಲ್ಲಪ್ಪ ಹೂಗಾರ, ವೀರೇಶ ಮಸ್ಕಿ, ಭೀಮಣ್ಣ, ವೆಂಕಣ್ಣ, ಶಶಿಧರ ಹೂಗಾರ, ಬಸವರಾಜ ವೀರಾಪುರ ಇದ್ದರು.