ಪ್ರಾದೇಶಿಕ ವಿಭಾಗದ ಕ್ರೀಡಾಕೂಟಕ್ಕೆ ಆಯ್ಕೆ

CTD VIDYA VIKASA-----09
Published on

ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಐಸಿಎಸ್‌ಇ ವಿಭಾಗದ ವಿದ್ಯಾರ್ಥಿಗಳು ವಲಯ ವಿಭಾಗದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಪ್ರಥಮ ಸ್ಥಾನಗಳಿಸಿರುವ ಸ್ಪರ್ಧಿಗಳು ಬೆಂಗಳೂರಲ್ಲಿ ನಡೆಯಲಿರುವ ಪ್ರಾದೇಶಿಕ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 10ನೇ ತರಗತಿಯ ಚಕ್ಷು ದೀಕ್ಷಿತ್ ಹ್ಯಾಮರ್ ಥ್ರೋ(ಪ್ರ), 100 ಮೀ. ಓಟ(ತೃ), ಸುಶಾಂತ್ ಪಟೇಲ್ 200 ಮೀ. ಹಾಗೂ 3000 ಮೀ.ಓಟ (ಪ್ರ), 400 ಮೀ. ಓಟ(ತೃ)ದಲ್ಲಿ ಸಾಧನೆ ಮಾಡಿದ್ದಾರೆ. ಶ್ರೇಯಸ್ 3000 ಮೀ.ಓಟ (ದ್ವಿ), ಜಾವಲಿನ್ ಥ್ರೋ(ತೃ), ಸುಧನ್ವ ಚಿನಿವಾರ್ ಜಾವಲಿನ್ ಥ್ರೋ(ಪ್ರ), ಧನುಷ್ ಹ್ಯಾಮರ್ ಥ್ರೋ(ದ್ವಿ), 4/100 ರಿಲೇ ಓಟದಲ್ಲಿ ಚಕ್ಷು ದೀಕ್ಷಿತ್, ಸುಧನ್ವ ಚಿನಿವಾರ್, ಸುಶಾಂತ್ ಪಟೇಲ್ ಮತ್ತು ಶ್ರೇಯಸ್(ತೃ), 4/400 ರಿಲೇ ಓಟದಲ್ಲಿ ಚಕ್ಷು ದೀಕ್ಷಿತ್, ಸುಧನ್ವ ಚಿನಿವಾರ್, ಸುಶಾಂತ್ ಪಟೇಲ್, ಶ್ರೇಯಸ್, ಧನುಶ್ ಎಲ್. ನಿಲೋಲ್ ಪ್ರಥಮ ಸ್ಥಾನ ಪಡೆದು ರೀಜನಲ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.

ವಲಯ ವಿಭಾಗದಿಂದ ಪ್ರಾದೇಶಿಕ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿರುವ ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯ್‌ಕುಮಾರ್,ನಿರ್ದೇಶಕರಾದ ಎಸ್.ಎಂ.ಪೃಥ್ವೀಶ್,ಪಿ.ಸಿ.ಸುನಿತಾ,ಐಸಿಎಸ್‌ಇ ಪ್ರಾಚಾರ‌್ಯ ಪಿ.ಬಸವರಾಜಯ್ಯ, ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net