ಪ್ರದೇಶಿಕ ಅಸಮತೋಲನ ನಿವಾರಣೆಗೆ ಜನರ ಭಾಗಿದಾರಿಕೆ ಅಗತ್ಯ

udp-22-samvada 1
Published on

ಉಡುಪಿ: ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಸ್ಥಳಿಯ ಜನರ ಭಾಗಿದಾರಿಕೆ ಅಗತ್ಯವಾಗಿದ್ದು, ಉಡುಪಿ ಜಿಲ್ಲೆ ಮಾದರಿಯಾಗಿದೆ. ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಗಾಗಿ ಅಕ್ಟೋಬರ್​ ತಿಂಗಳೊಳಗೆ ಸರ್ಕಾರ ವರದಿ ಸಲ್ಲಿಸಲಾಗುವುದು ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ. ಗೋವಿಂದರಾವ್​ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಡಾ.ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಹಾಗೂ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಜಿಲ್ಲಾ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಂಜುಂಡಪ್ಪ ಸಮಿತಿ ವರದಿಯಲ್ಲಿ 114 ಹಿಂದುಳಿದ ತಾಲೂಕುಗಳನ್ನು ಗುರುತಿಸಲಾಗಿದ್ದು, 31 ಸಾವಿರ ಕೋಟಿ ರೂ. ಅನುದಾನ ಒದಗಿಸುವಂತೆ ಸೂಚಿಲಾಗಿತ್ತು. ಸರ್ಕಾರ ಈ ತಾಲೂಕುಗಳಿಗೆ ಈವರೆಗೆ 35,180 ಕೋಟಿ ರೂ. ಬಿಡುಗಡೆ ಮಾಡಿದ್ದು, 32,610 ಕೋಟಿ ರೂ. ರ್ಖಚಾಗಿದೆ. ಆದರೂ ನಿರೀೆಗೆ ತಕ್ಕಂತೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಈ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸಲಾಗುವುದು ಎಂದರು.

4 ಜಿಲ್ಲೆಗಳಲ್ಲಿ ತಲಾದಾಯ ಹೆಚ್ಚು

ರಾಜ್ಯದ ಆದಾಯದಲ್ಲಿ ಶೇ. 40ರಷ್ಟು ಪಾಲು ಬೆಂಗಳೂರು ನಗರ ಜಿಲ್ಲೆಯಿಂದ ಲಭ್ಯವಾಗುತ್ತಿದ್ದು, ಉಳಿದಂತೆ ದ.ಕ., ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾದಾಯ ಪ್ರಮಾಣ ಹೆಚ್ಚಾಗಿದೆ. ಕಲಬುರಗಿ ವಿಭಾಗ ವ್ಯಾಪ್ತಿಯ 4 ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ ಎಂದು ಮಾಹಿತಿ ನೀಡಿದರು.

ಅಭಿವೃದ್ಧಿ ಸೂಚಕಗಳಾಗಿ ಆರ್ಥಿಕವಾಗಿ ಒಟ್ಟು ದೇಶೀಯ ಉತ್ಪನ್ನ, ತಲಾ ಆದಾಯ, ಆರ್ಥಿಕ ರಚನೆ, ಸಾಮಾಜಿಕವಾಗಿ ಜೀವಿತಾವಧಿ, ಶಿಶು ಮರಣ ಪ್ರಮಾಣ ಮತ್ತು ಸಾಕ್ಷರತಾ ಪ್ರಮಾಣ, ಪರಿಸರ ಸಂಬಂಧಿತವಾದ ನೈಸರ್ಗಿಕ ಸಂಪನ್ಮೂಲ, ಸವಕಳಿ ಸೂಚಕಗಳೂ ಸೇರಿದಂತೆ ಮತ್ತಿತರ 35 ಸೂಚಕಗಳನ್ನು ಪರಿಗಣಿಸಲಾಗುವುದು ಎಂದ ಅವರು, ಜಿಲ್ಲೆಯ ಮತ್ತಷ್ಟು ಸಮಗ್ರ ಅಭಿವೃದ್ಧಿಗೆ ಏನೆಲ್ಲಾ ಅವಶ್ಯಗಳ ಬಗ್ಗೆ ಶಿಫಾರಸನ್ನು ಮಾಡಲಾಗುವುದು ಎಂದರು.

ಸಿಆರ್​ಝಡ್​ ಸಮಸ್ಯೆ ಬಗೆಹರಿಸಿ ಶಾಸಕ ಕಿರಣ್​ ಕುಮಾರ್​ ಕೊಡ್ಗಿ ಮಾತನಾಡಿ, ಸಿ.ಆರ್​.ಝಡ್​ ವ್ಯಾಪ್ತಿಯಲ್ಲಿ 500 ರಿಂದ 200 ಮೀ. ವ್ಯಾಪ್ತಿಯಲ್ಲಿ ರ್ನಿಬಂಧವಿರುವುದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ತೊಡಕು ಉಂಟಾಗುತ್ತಿದೆ. ವೈಲ್ಡ್​ ಲೈಫ್​ ಆಕ್ಟ್​ ಅನ್ವಯ ಒಂದು ಕಿಮೀ ಇಕೋ ಸೆನ್ಸಿಟಿವ್​ ಝೊನ್​ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಕೇವಲ ಮನೆ ಕಟ್ಟಿಕೊಂಡು ಜೀವನ ನಡೆಸಲು ಅವಕಾಶವಿದೆ. ಭೂ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಪಂಚಾಯತಿಗಿದ್ದ ಭೂ ಪರಿವರ್ತನೆಗೆ ಅಧಿಕಾರವನ್ನು ತೆಗೆದು ಹಾಕಲಾಗಿದೆ. ಪ್ರಾಧಿಕಾರವೇ ಇದಕ್ಕೆ ಅನುಮತಿ ನೀಡಬೇಕು. ಇದರಿಂದ ಭೂ ಪರಿವರ್ತನೆ ಕಾರ್ಯ ವಿಳಂಬವಾಗುತ್ತಿದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಯೋಜನಾ ಇಲಾಖೆಯ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ವಿಶಾಲ್​ ಆರ್​., ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ಎಸ್​.ಪಿ. ಡಾ. ಅರುಣ್​ ಕೆ. ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕಾ ಪ್ರದೇಶಗಳ ವಿಸ್ತರಣೆಯಾಗಬೇಕು. ದೊಡ್ಡ ಪ್ರಮಾಣದ ಕೈಗಾರಿಕೆಗಳು ಬಂದಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳೂ ಸಹ ಹುಟ್ಟಿಕೊಳ್ಳುತ್ತವೆ. 9 ಮತ್ತು 11 ದಾಖಲಾತಿಗಳನ್ನು ಪಡೆಯುವ ಕಾರ್ಯ ತುಂಬಾ ವಿಳಂಬವಾಗುತ್ತಿದೆ. ಕೈಗಾರಿಕೆಗಳಿಗೆ ಎರಡು ಎಕರೆಗಿಂತ ಕಡಿಮೆ ಜಾಗಕ್ಕೆ ಭೂ ಪರಿವರ್ತನೆಗೆ ವಿನಾಯಿತಿ ನೀಡಬೇಕು. ಮಂಗಳೂರಿನಿಂದ ಮುಂಬೈಗೆ ರೈಲಿನಲ್ಲಿ ಈ ಹಿಂದೆ 16 ಟನ್​ಗಳಷ್ಟು ಸರಕುಗಳ ಸಾಕಾಣಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೀಗ ಈ ಪ್ರಮಾಣ ಅರ್ಧಕ್ಕೆ ಇಳಿಕೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು. ಹರೀಶ್​ ಕುಂದರ್​, ಅಧ್ಯಕ್ಷರು, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net