

ಸಿರಿಗೆರೆ: ಸಮಾಜದಲ್ಲಿ ಮಹಿಳೆ ಸ್ವಾವಲಂಬಿಗಳಾಗಿ ಸ್ವ ಉದ್ಯೋಗ ಕೈಗೊಳ್ಳಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಕಲ ನೆರವನ್ನು ನೀಡಲಿದೆ ಎಂದು ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಗೀತಾ ಹೇಳಿದರು.
ಸಿರಿಗೆರೆ ವಲಯದ ಕೋಣನೂರು ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆ ಇತ್ತೀಚಿಗೆ ಜ್ಞಾನವಿಕಾಸ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಸಂಘದ ಸದಸ್ಯರು ಆರ್ಥಿಕವಾಗಿ ಸಬಲರಾಗಲು ಸಂಸ್ಥೆ ಅವಕಾಶ ಕಲ್ಪಿಸಿದೆ.
ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಶಿಕ್ಷಣ, ಕಾನೂನು, ಆರೋಗ್ಯ, ನೈರ್ಮಲ್ಯತೆ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ್ಗೆ ಆಯೋಜಿಸುತ್ತಿದೆ.
ಮಹಿಳೆಯರು ಸಬಲರಾಗಬೇಕು ಎನ್ನುವ ಉದ್ದೇಶದಿಂದ ಧರ್ಮಸ್ಥಳ ಸಂಸ್ಥೆ, ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸ್ವಂತ ಉದ್ಯೋಗದಿಂದ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯೆಕ್ಷೆ ಲಲಿತಮ್ಮ, ಬಸವರಾಜ್, ಯೋಜನಾಧಿಕಾರಿಗಳಾದ ಪ್ರವೀಣ್, ರತ್ನ, ವಲಯ ಮೇಲ್ವಿಚಾರಕ ಮೋಹನ್, ಸೇವಾ ಪ್ರತಿನಿಧಿ ರೇಖಾ ಇತರರಿದ್ದರು.