ಪ್ರವಾಸೋದ್ಯಮದಿಂದ ಪ್ರಾದೇಶಿಕ ಅಭಿವೃದ್ಧಿ : ಶಾಲೆಟ್ ಪಿಂಟೋ ಚಿಂತನೆ

New Project (19)
Published on

ಹಳೆಯಂಗಡಿ: ಕರಾವಳಿ ಪ್ರದೇಶವು ಸಮೃದ್ಧ ಪರಿಸರವಾಗಿ ಪ್ರವಾಸೋದ್ಯಮಕ್ಕೆ ಪೂರಕ ಪ್ರದೇಶವಾಗಿ ಅಭಿವೃದ್ಧಿಗೊಂಡಲ್ಲಿ ಪ್ರಾದೇಶಿಕವಾಗಿ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ ಎಂದು ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.

ಹಳೆಯಂಗಡಿ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ದೇವಾಲಯದಲ್ಲಿ ಬೆಳೆ ಹಬ್ಬದ ಆರಾಧನೆ ಹಾಗೂ ಆಟೋಟ ಸ್ವರ್ಧಾ ಕಾರ್ಯಕ್ರಮದ ಸಂದರ್ಭ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೆಳೆ ಹಬ್ಬದ ಆರಾಧನೆ ಸಂದೇಶವನ್ನು ವಿಶ್ರಾಂತ ಸಭಾಪಾಲಕ ಐಸನ್ ಎಸ್ ಪಾಲನ್ನ ನೀಡಿದರು. ಸಭಾಪಾಲಕ ಅಮೃತ್ ರಾಜ್ ಖೋಡೆ ಅಧ್ಯಕ್ಷತೆ ವಹಿಸಿದ್ದರು. ವಕೀಲ ಡೇನಿಯಲ್ ದೇವರಾಜ್ ದಿಕ್ಸೂಚಿ ಭಾಷಣ ಮಾಡಿದರು.

ಸಂಧ್ಯಾ ಖೋಡೆ , ಚರ್ಚಿನ ಹಿರಿಯರಾದ ರಾಹುಲ್ ಕರ್ಕಡ, ವಿಜಯ ಪ್ರಕಾಶ್ ಕರ್ಕಡ, ರೆನಿಟಾ ಕರ್ಕಡ, ಮೇರಿ ಡೇನಿಯಲ್, ಪುಷ್ಪಲತಾ ಪಾಲನ್ನ, ಸುಶ್ಮಾ ಕರ್ಕಡ, ಜೋಸ್ಲಿ ಬಂಗೇರಾ, ಡೆಲಿನ್ ನಿಶೇಲ್ ಕರ್ಕಡ, ಸುಪ್ರೀತಾ ಕರ್ಕಡ, ಆಟೋಟ ಸ್ವರ್ಧೆಗಳ ಸಮಿತಿಯ ಕಾರ್ಯದರ್ಶಿ ರೆಮಿ ಸ್ಯಾಮುವೆಲ್, ಖಜಾಂಚಿ ಸುಹಾನ್ ಪಾಲನ್ನ, ಡಿಯೋಲ್ ಕರ್ಕಡ ಉಪಸ್ಥಿತರಿದ್ದರು.

ಪಾಲನಾ ಸಮಿತಿಯ ಕಾರ್ಯದರ್ಶಿ ಸುಶ್ಮಾ ಕರ್ಕಡ ಕಾರ್ಯಕ್ರಮ ನೆರವೇರಿಸಿದರು. ರೆಮಿ ಸ್ವಾಗತಿಸಿದರು. ಸುಹಾನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net