

ಹಳಿಯಾಳ: ಕದಂಬರು, ಚೋಳರು, ವಿಜಯನಗರ ಸಾಮ್ರಾಜ್ಯದ ನಾಣ್ಯಗಳನ್ನು ವಿದ್ಯಾರ್ಥಿಗಳು ವೀಕ್ಷಣೆ ಮಾಡುವುದರಿಂದ ಅಂದಿನ ರಾಜರ ಆಡಳಿತದ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಹಳಿಯಾಳ ಶ್ರೀ ಶಿವಾಜಿ ಪಿಯು ಕಾಲೇಜ್ ಪ್ರಾಚಾರ್ಯ ರಮೇಶ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶಿವಾಜಿ ಸರ್ಕಾರಿ ಪದವಿಪೂರ್ವ ಕಾಲೇಜ್ನಲ್ಲಿ ತ್ತೀಚೆಗೆ ಹಮ್ಮಿಕೊಂಡಿದ್ದ ಕಲಘಟಗಿಯ ಹವ್ಯಾಸಿ ಕಲಾವಿದ ಸುನೀಲ ಕಮ್ಮಾರ ಅವರು ಸಂಗ್ರಹಿಸಿರುವ ಹಲವು ತಲೆಮಾರುಗಳ ವಿವಿಧ ಬಗೆಯ ನಾಣ್ಯ, ನಗದು ಹಣ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜ ಸೇವಕ ಪರಶುರಾಮ ಎತ್ತಿನಗುಡ್ಡ ಮಾತನಾಡಿ, ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನ್ನೆಲೆಯಲ್ಲಿ ರಾಜ್ಯದ 50 ಶಾಲೆಗಳಲ್ಲಿ ಕಲಾವಿದ ಸುನೀಲ ಕಮ್ಮಾರ ಅವರು ಹಳೆಯ ನಾಣ್ಯ ಪ್ರದರ್ಶನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ನಾಣ್ಯ ಸಂಗ್ರಹಾಕಾರ ಸುನೀಲ ಅವರ ಕಾರ್ಯವನ್ನು ಗುರುತಿಸುವ ಕೆಲಸ ಮಾಡಬೇಕು. ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಸಾವಿರಾರು ಪ್ರದರ್ಶನ ಆಯೋಜಿಸಿ ಇತಿಹಾಸ ತಿಳಿಸುವ ಕೆಲಸ ಮಾಡುತ್ತಿರುವ ಅವರ ಕಾರ್ಯವನ್ನು ಶ್ಲಾಘಿಸಿದರು.
ಶಿಕ್ಷಕ ಪರಶುರಾಮ ಗಿರಿಯಪ್ಪನವರ ಹಾಗೂ ಸಿಬ್ಬಂದಿ ಇದ್ದರು.