ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್​ಗಳಿಗೆ ಪುನಶ್ಚೇತನ ಕಾರ್ಯಾಗಾರ

SCOUTS AND GUIDS TRAINING
Published on

ಹಾನಗಲ್ಲ: ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮಗಳ ಮೂಲಕ ಶಿಕ್ಷಕರಲ್ಲಿ ಶಿಸ್ತು, ವ್ಯಕ್ತಿತ್ವ ನಿರ್ಮಾಣ ಪೂರಕ ಅಂಶಗಳ ಬೆಳವಣಿಗೆಯಾಗುತ್ತದೆ. ಎಲ್ಲ ಶಾಲೆಗಳಲ್ಲಿ ಸ್ಕೌಟ್ ತಂಡಗಳ ರಚನೆಗೆ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ತಾಲೂಕು ಘಟಕದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್​ಗಳಿಗೆ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರಲ್ಲಿನ ಶಿಸ್ತನ್ನು ವಿದ್ಯಾರ್ಥಿಗಳು ಪಾಲಿಸುತ್ತಾರೆ. ಹೀಗಾಗಿ, ಶಿಕ್ಷಕರಿಗೆ ಶಿಸ್ತಿನ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಶಾಲೆಗಳಲ್ಲಿ ಇರುವ ಸ್ಕೌಟ್ ದಳ ನಾಯಕ-ನಾಯಕಿಯರು ತಮ್ಮ ಶಾಲೆಗಳಲ್ಲಿ ಘಟಕಗಳನ್ನು ತೆರೆದು ಮಕ್ಕಳಿಗೆ ಸ್ಕೌಟ್ಸ್-ಗೈಡ್ಸ್ ಚಟುವಟಿಕೆಗಳ ತರಬೇತಿ ನೀಡುವ ಮೂಲಕ ಸತ್ಸಮಾಜ ನಿರ್ವಿುಸಬೇಕು ಎಂದರು.

ಕಾರ್ಯದರ್ಶಿ ಪಿ.ಆರ್. ಚಿಕ್ಕಳ್ಳಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಸಕ್ತ ವರ್ಷದ ಚಟುವಟಿಕೆಗಳ ವಾರ್ಷಿಕ ಕಾರ್ಯಯೋಜನೆಯನ್ನು ಸ್ಕೌಟ್ ಮಾಸ್ಟರ್ ಸಂತೋಷ್ ಬಿದರಗಡ್ಡೆ ವಿವರಿಸಿದರು.

ಜಿಲ್ಲಾ ತರಬೇತಿ ಆಯುಕ್ತ ಎಂ.ಆರ್. ಪಾಟೀಲ, ಶಿಬಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಬಗ್ಗೆ, ಶಾಲಾ ಮಟ್ಟದಲ್ಲಿ ಕೈಗೊಳ್ಳುವ ಚಟುವಟಿಕೆಗಳ ಬಗ್ಗೆ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಉದ್ದೇಶಗಳನ್ನು ತಿಳಿಸಿದರು.

ದೈಹಿಕ ಶಿಕ್ಷಣಾಧಿಕಾರಿ ಜಿ.ಎಂ. ಪಂಚಾಳ, ಸಂತೋಷ ದೊಡ್ಡಮನಿ, ರತ್ನಾ ತಳವಾರ, ಸ್ಕೌಟ್ಸ್ ಮಾಸ್ಟರ್ ಬಿ.ಎಂ. ದಿಡಗೂರ, ಆರ್.ಎನ್. ಜವಳಿ, ಡಿ.ಎಫ್. ಬಳೆಗಾರ, ಆರ್.ಬಿ. ರೆಡ್ಡಿ, ವೆಂಕಟೇಶ, ವೀರೇಂದ್ರ ನವಾತಿ, ಎ.ಎನ್. ಯೋಗೇಂದ್ರಚಾರ್, ಸಿ.ಎನ್. ಮಹೇಶ, ನಿಂಗಪ್ಪ ಸಾಳಂಕಿ, ಅನ್ನಪೂರ್ಣ ಹಾಗೂ ವಿವಿಧ ಶಾಲೆಗಳ ಕ್ಯಾಪ್ಟನ್​ಗಳು ಪಾಲ್ಗೊಂಡಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಹಾಗೂ ಬಿಇಒ ಕಚೇರಿ ಅಧೀಕ್ಷಕ ಮಹೇಶಕುಮಾರ ಹನಕೆರೆ ಅವರನ್ನು ಸನ್ಮಾನಿಸಲಾಯಿತು. ಪಿ.ಎಸ್. ಚಿಲ್ಲೂರಮಠ ಹಾಗೂ ರಮೇಶ ಅರಬಾಳ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net