

ಕೋಲಾರ: ಅಸ್ಪೃಶ್ಯತೆ ಮೌಢ್ಯದ ಬಗ್ಗೆ ಶೋಷಿತ ಸಮುದಾಯಗಳಲ್ಲಿರುವ ಭಯ ದೂರವಾದಾಗ ಮಾತ್ರ, ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅರಿವು ಭಾರತದಿಂದ ಶನಿವಾರ ಹಮ್ಮಿಕೊಂಡಿದ್ದ ಸಮಾಜ ಸುಧಾರಣೆಯ ದಶಮಾನೋತ್ಸವದಲ್ಲಿ ಒಳ&ಹೊರಗು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಅನಿಷ್ಟ ಪದ್ಧತಿ ದೂರ ಮಾಡಿ, ಎಲ್ಲರೂ ಒಂದೇ ಎಂಬ ಮನೋಭಾವ ಮೂಡಬೇಕು. ಸಮಾಜ ಸುಧಾರಣೆ ಕಾರ್ಯಸುಲಭವಲ್ಲ. ಬಹಳಷ್ಟು ಸಂಕಷ್ಟ ಎದುರಾಗುತ್ತದೆ. ಅದು ಸಹ ಮೊದಲು ಕುಟುಂಬದಿಂದಲೇ ಎಂದರು.
ಇತ್ತೀಚಿನ ದಿನಗಳಲ್ಲಿ ಜನ ಕೆಟ್ಟದ್ದನ್ನು ಬಹಳ ಬೇಗ ಸ್ವೀಕರಿಸುತ್ತಾರೆ. ಆದರೆ, ನೀನು ತಪು$್ಪ ಮಾಡಿದ್ದೀಯ ತಿದ್ದಿಕೊ ಎಂದರೆ ನಂಬುವುದಿಲ್ಲ. ಸುಳ್ಳು ಹೇಳಿದರೆ ಬೇಗ ನಂಬುತ್ತಾರೆ. 1,000 ವರ್ಷಗಳ ಹಿಂದೆ ಎಲ್ಲ ಜಾತಿ, ಧರ್ಮ ಒಂದೇ ಇತ್ತು, ಕಾಡಿನಲ್ಲೇ ಜೀವನ ನಡೆಸಬೇಕಿತ್ತು, ಬದಲಾದ ಹಿನ್ನೆಲೆಯಲ್ಲಿ ಆಚರಣೆಗಳು ಶುರುವಾಗಿ ಸಾಮಾಜಿಕ ಪೀಡುಗುಗಳು ಕಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಅನಿಷ್ಟ ಪದ್ಧತಿಗಳಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತರಾಗಬೇಕು. ಹಿಂದೆ ಇಲ್ಲದ ಅನಿಷ್ಟ ಪದ್ಧತಿಯನ್ನು ಈಗಿನವರು ಮನಸ್ಸಿನಲ್ಲಿ ಬಹಳ ಗಟ್ಟಿಯಾಗಿ ನಾಟಿಸಿಕೊಂಡಿದ್ದು, ಇದನ್ನು ಹೋಗಲಾಡಿಸಲು ಮುಂದಾಗಬೇಕು ಎಂದು ಎಚ್ಚರಿಸಿದರು.
ಶೋಷಿತ ಸಮುದಾಯಗಳಲ್ಲಿರುವ ಭಯ ಹೋಗಬೇಕು, ಆದ್ದರಿಂದಲೇ ನಾನು ನಾಲ್ಕು ಬಾರಿ ಶಾಸಕನಾದರೂ ರಾಹುಕಾಲದಲ್ಲೆ ನಾಮಪತ್ರ ಸಲ್ಲಿಸಿದೆ. ಅಮಾವಾಸ್ಯೆ ದಿನ ಗೃಹ ಪ್ರವೇಶ ಮಾಡಿರುವುದು, ಬದಲಾವಣೆ ಕಾಣಲು ಮಾನವ ಬಂಧುತ್ವ ವೇದಿಕೆ ಕಟ್ಟಲಾಗಿದೆ ಎಂದರು.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಈಗಿನ ಸಂದರ್ಭದಲ್ಲಿ ಸಂವಿಧಾನಕ್ಕೆ ಧಕ್ಕೆ ಉಂಟಾಗುವ ಲಕ್ಷಣ ಗೋಚರಿಸುತ್ತಿವೆ. ಅಸ್ಪ-----ೃಶ್ಯತೆ ಕಿತ್ತಾಕುವ ಬಗ್ಗೆ ಧ್ವನಿ ಕೇಳುತ್ತಿಲ್ಲ, ಪರ್ಯಾಯ ಸಂವಿಧಾನದ ಧ್ವನಿ ಎತ್ತಿದ್ದು, ಗಂಭೀರವಾಗಿ ಪರಿಗಣಿಸಬೇಕು. ಸಂವಿಧಾನ ಉಳಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ, ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅರಿವು ಭಾರತ ಮುಖ್ಯಸ್ಥ ಡಾ.ಶಿವಪ್ಪ ಅರಿವು ಮಾತನಾಡಿ, ತಂಡದಲ್ಲಿ ಎಲ್ಲ ಸಮುದಾಯದ ಮುಖಂಡರಿದ್ದು, ಸಮಾನತೆ ಸಾರುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜದಲ್ಲಿ ಪರಿವರ್ತನೆ ಕಾಣಬೇಕು ಎಂಬುದು ನಮ್ಮ ಮೂಲ ಉದ್ದೇಶ. ವಿಭಿನ್ನ ಪರಿಕಲ್ಪನೆಯಿಟ್ಟುಕೊಂಡು ಗೃಹ ಪ್ರವೇಶ, ಸಹ ಭೋಜನ, ಪ್ರತಿಜ್ಞಾವಿಧಿ, ಪತ್ರ ಚಳವಳಿ, ನಮತೆಯ ಟೀ, ದೇವಾಲಯ ಪ್ರವೇಶ, ಒಂದು ಊರು ಒಂದು ನೀರು, ಅಸ್ಪ-----ೃಶ್ಯತೆಮುಕ್ತ ಮನೆ ಅಭಿಯಾನ ಹೀಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಮುಖಂಡರಾದ ಟಿ.ವಿಜಯಕುಮಾರ್, ಅಬ್ಬಣಿ ಶಿವಪ್ಪ, ಆನಂದ್ ಕುಮಾರ್, ಪಂಡಿತ್ ಮುನಿವೆಂಟಪ್ಪ, ವರದೇನಹಳ್ಳಿ ವೆಂಕಟೇಶ್ ಉಪಸ್ಥಿತರಿದ್ದರು.
ಹೋರಾಟ ನಿಲ್ಲಿಸಲಾಗದು
ಅಸ್ಪೃಶ್ಯತೆ ಮೌಢ್ಯಕ್ಕೆ ಸಂಬಂಧವಿದ್ದು, ಪ್ರೀತಿಯ ಮೂಲಕ ಮನ ಪರಿವರ್ತನೆ ಮಾಡಿ ಬದಲಾವಣೆ ಕಾಣಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ತಿಳಿಸಿದರು.
ಜಿಲ್ಲೆಯಲ್ಲಿ 10 ವರ್ಷದ ಹಿಂದೆ ಗೃಹ ಪ್ರವೇಶ ಕಾರ್ಯಕ್ರಮ ಶುರುವಾಗಿ ಅದು ಈಗ ಅರಿವು ಭಾರತ ಸಂಟನೆಯಾಗಿ ರೂಪ ತಾಳಿ ಚಳವಳಿಯಾಗಿ ಹೋರಾಟ ನಡೆಸುತ್ತಿದೆ. ಈ ಹೋರಾಟವನ್ನು ಯಾರೂ ನಿಲ್ಲಸಲಾಗದು. ಮಾನವೀಯ ಪರಿವರ್ತನೆಯು ರಾಜ್ಯವಲ್ಲದೆ ದೇಶಾದ್ಯಂತ ಆಗುವ ನಿರೀಕ್ಷೆಯಿದೆ ಎಂದರು.
ಸಾಮಾಜಿಕ ಪಿಡುಗು
ಅಸ್ಪೃಶ್ಯತೆ ಸ್ವಾತಂತ್ರ್ಯ ಪೂರ್ವದಿಂದಲೂ ಆಚರಣೆಯಲ್ಲಿದ್ದು, ಇದೊಂದು ಸಾಮಾಜಿಕ ಪಿಡುಗು ಆಗಿದೆ. ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದನ್ನು ಕಾನೂನಿನಿಂದ ನಿಮೂರ್ಲನೆ ಮಾಡಲು ಸಾಧ್ಯವಿಲ್ಲ, ಮಾನವೀಯ ಪರಿವರ್ತನೆಯಿಂದ ಮಾತ್ರ ಸಾಧ್ಯ ಎಂದು ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಅಭಿಪ್ರಾಯಪಟ್ಟರು.
ಸಮಸ್ಯೆಯು ವೈಯಕ್ತಿಕವಾದದ್ದು, ಕೆಟ್ಟ ಪರಿಣಾಮ ತೊಲಗಿಸಬೇಕು. ಸಹ ಬೋಜನ ಕಾರ್ಯಕ್ರಮದಿಂದ ಜನರ ಮನಸ್ಸಿನಲ್ಲಿ ಬದಲಾವಣೆ ತರಬಹುದು ಎಂದರು.
ಮಾನಸಿಕ ಕೊಳೆಗೇರಿ ಸೃಷ್ಟಿ
ಪ್ರಸ್ತುತ ಕಾಲಟ್ಟದಲ್ಲಿ ಅಸ್ಪೃಶ್ಯತೆ ನಿಮೂರ್ಲನೆ ಕಾರ್ಯಕ್ರಮ ಮನೆಮನೆಯ ಚಳವಳಿಯಾಗಿ ರೂಪುಗೊಂಡಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭರವಸೆ ನೀಡಿದರು.
ನಗರ ಪ್ರದೇಶಗಳಲ್ಲಿ ಜಾತಿಯತೆ ರೂಪುಗೊಂಡಿದೆ. ಮನೆ ಬಾಡಿಗೆ ಕೊಡಬೇಕಾದರೆ ವೆಜ್ ಅಥವಾ ನಾನ್ ವೆಜ್ಜಾ, ಇನ್ನೂ ಮುಂದೆ ಹೋಗಿ ತಂದೆ ಹೆಸರು ಕೇಳುತ್ತಾರೆ. ಅದರಲ್ಲೂ ಏನಾದರು ಜಾತಿ ಮೂಲ ಸಿಗಬಹುದೇ ಅಂತ. ಇದನ್ನೆಲ್ಲ ಗಮನಿಸುತ್ತಿದ್ದರೆ ಮಾನಸೀಕ ಕೊಳೆಗೇರಿ ಸೃಷ್ಟಿ ಮಾಡಿಕೊಂಡಿದ್ದಾರೆ ಎಂಬ ನೋವು ಕಾಡುತ್ತಿದೆ ಎಂದು ಬೇಸರಿಸಿದರು. ಆಧುನಿಕತೆ ಮುಂದುವರಿದರೂ ಮಾತುಕತೆಯ ನಡುವೆ ಮೂಲ ಜಾತಿ ಹುಡುಕಿಕೊಂಡು ಹೋಗುತ್ತಾರೆ. ಮೇಲ್ನೋಟಕ್ಕೆ ಚೆನ್ನಾಗಿ ಮಾತನಾಡಬಹುದು, ಶೋಷಿತರನ್ನು ಕುಗ್ಗಿಸುವ ಕೆಲಸ ಆಗುತ್ತಿದೆ. ಈಗಿನ ಮಕ್ಕಳಲ್ಲಿ ಬದಲಾವಣೆ ತರಬೇಕಿದೆ ಎಂದರು.