

ಹುಬ್ಬಳ್ಳಿ : ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗೆ ಪೆಟ್ಟು ಕೊಡುತ್ತಿರುವ ಸರ್ಕಾರಗಳು, ಸಂಘದಿಂದ ನೀಡುವ ಬೆಳೆ ಸಾಲ ಮಾಧ್ಯಮಾವಧಿ ಸಾಲಗಳ ವ್ಯವಹಾರದಲ್ಲಿ ಬಡ್ಡಿಯ ಮಾರ್ಜಿನ್ ಹಣ ಶೇ. 1.75ಕ್ಕೆ ಕ್ಕೆ ಇಳಿಸಿದ್ದು ಖಂಡನೀಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ-ಬ್ಯಾಂಕ್ಗಳ ಕ್ಷೇಮಾಭಿವೃದ್ಧಿ ಮಹಾಮಂಡಳದ ಅಧ್ಯಕ್ಷ ಡಿ.ಎಸ್. ಬಡಗಿಗೌಡರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2015-16ರವರೆಗೆ ಬಡ್ಡಿಯ ಮಾರ್ಜಿನ್ ಹಣ ಶೇ. 3ರಷ್ಟಿತ್ತು. ಆದರೆ ನಂತರದಲ್ಲಿ ಶೇ. 2.40 ರಿಂದ ಶೇ. 2ರವರೆಗೆ ಇಳಿಸಲಾಯಿತು ಎಂದು ದೂರಿದರು.
ಇದು ಕೃಷಿ ಪತ್ತಿನ ಸಂಘಗಳಿಗೆ ಆರ್ಥಿಕವಾಗಿ ದೊಡ್ಡಪೆಟ್ಟು ನೀಡಿದೆ. ಸಂಘದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಮತ್ತು ಸಹಕಾರ ಇಲಾಖೆಯ ಕಾರ್ಯದರ್ಶಿಗಳು ಮಾರ್ಜಿನ್ ಹಣವನ್ನು ಈ ಮೊದಲಿನಂತೆ ಶೇ. 3ರಷ್ಟು ನೀಡುವಂತೆ ಆಗ್ರಹಿಸಿದರು.
ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ, ನಿರ್ದೇಶಕ ಜನಾರ್ಧನ ಪಟಗಾರ, ಕಲ್ಲನಗೌಡ ಸುದ್ದಿಗೋಷ್ಟಿಯಲ್ಲಿದ್ದರು.