

ಬೆಂಗಳೂರು:ಅಪಘಾತಗಳ ಸಂಖ್ಯೆ ತಗ್ಗಿದರೆ ಅಭಿವೃದ್ಧಿಗೆ ಪೂರಕವಾಗುವ ಜತೆಗೆ ಜಿಡಿಪಿ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇಂಡಿಯನ್ ವೆಹಿಕಲ್ ಡೆವರ್ಸ್ ಟ್ರೇಡ್ ಯೂನಿಯನ್ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿವರ್ಷ ದೇಶದಲ್ಲಿ ಅಪಘಾತಗಳಿಂದ ಹೆಚ್ಚಿನ ಮಂದಿ ಸಾವಿಗೀಡಾಗುತ್ತಿದ್ದಾರೆ. ಕೈ,ಕಾಲು ಕಳೆದುಕೊಂಡು ಆತನ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿದೆ. ಅಪಘಾತ ಸಂಭವಿಸಬಾರದು ಎಂಬ ಪ್ರತಿಜೆ ಕೈಗೊಂಡು ವಾಹನ ಚಾಲನೆ ಮಾಡಿದರೆ ಸಾಕಷ್ಟು ತೊಂದರೆಗಳಿಂದ ಮುಕ್ತಿಹೊಂದಬಹುದು. ಹಾಗಾಗಿ, ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಮೂಲಕ ಹೆಚ್ಚಿನ ಅಪಾಯ ತಪ್ಪಿಸಬೇಕು ಎಂದು ಸಚಿವರು ಕಿವಿ ಮಾತು ಹೇಳಿದರು.
ಅಪಘಾತ ರಹಿತ ಚಾಲನೆ ಮಾಡಿ ಅನನ್ಯ ಸೇವೆ ಸಲ್ಲಿಸಿದ್ದ 25 ಚಾಲಕರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. 25 ಮಂದಿಗೆ ಕಲಾ ಸೇವಾ, ಸಂಗೀತ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಸಂಸ್ಥಾಪಕ ಗಂಡಸಿ ಸದಾನಂದಸ್ವಾಮಿ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್, ಚಲನಚಿತ್ರ ನಿರ್ಮಾಪಕರ ಸಂದ ಅಧ್ಯ ಉಮೇಶ್ ಬಣಕಾರ್, ಹಿರಿಯ ನಿರ್ಮಾಪಕ ಓಂ ಸಾಯಿಪ್ರಕಾಶ್, ಗೋವು ಸಂರಣಾ ಹೋರಾಟಗಾರ ಮಹೇಂದ್ರ ಮನೋತ್, ಹಿರಿಯ ಕಲಾವಿದ ವೈಜನಾಥ ಬಸಪ್ಪ ಬಿರಾದದ್, ನಟ ಮೂಗು ಸುರೇಶ್, ಗಿಚ್ಚಿಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ ಮತ್ತಿತರರಿದ್ದರು.