ಕರಾವಳಿಯಲ್ಲಿ ಕ್ಷೀಣಗೊಂಡ ಮಳೆ

IMG_8021
Published on

ಮಂಗಳೂರು: ಕಳೆದ ಹಲವು ವಾರಗಳ ಕಾಲ ಕರಾವಳಿಯಲ್ಲಿ ಅಬ್ಬರಿಸಿದ ಮಳೆ ಕ್ಷೀಣಗೊಂಡಿದೆ. ಬುಧವಾರ ರಾತ್ರಿ ಹಾಗೂ ಗುರುವಾರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಲ್ಪ ಮಳೆಯಾಗಿದೆ.

ಬುಧವಾರ ರಾತ್ರಿ ಕೆಲಕಾಲ ಗಾಳಿ ಸಹಿತ ಮಳೆಯಾಗಿದ್ದು ಬಿಟ್ಟರೆ ಗುರುವಾರ ಹಗಲಿಡೀ ಅಲ್ಲಲ್ಲಿ ಸಾಧಾರಣ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಸರಾಸರಿ 15.6 ಮಿಮೀ. ಮಳೆಯಾದೆ. ಬೆಳ್ತಂಗಡಿಯಲ್ಲಿ 16.6 ಮಿಮೀ, ಬಂಟ್ವಾಳ 17.8 ಮಿಮೀ, ಮಂಗಳೂರು 12.6 ಮಿಮೀ, ಪುತ್ತೂರು 15.9 ಮಿಮೀ, ಸುಳ್ಯದಲ್ಲಿ 16.3 ಮಿಮೀ ಮಳೆ ದಾಖಲಾಗಿದೆ.

*ನದಿ ನೀರಿನ ಮಟ್ಟ ಇಲಿಕೆ

ಜಿಲ್ಲೆಯ ನದಿಗಳ ನೀರಿನ ಮಟ್ಟವೂ ಇಳಿಕೆಯಾಗಿದೆ. ಘಟ್ಟ ಪ್ರದೇಶದಲ್ಲಿ ಮಳೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಕಳೆದ ವಾರಾಂತ್ಯಕ್ಕೆ ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 26.50 ಮೀಟರ್, ಬಂಟ್ವಾಳ ನೇತ್ರಾವತಿ ನದಿ 5.6 ಮೀಟರ್ ಹಾಗೂ ಗುರುಪುರ ಫಲ್ಗುಣಿ ನದಿ 4.47 ಮೀಟರ್‌ನಲ್ಲಿ ಹರಿದರೆ ಗುರುವಾರ ಕುಮಾರಧಾರ ನದಿ 25.20 ಮೀಟರ್, ಬಂಟ್ವಾಳ ನೇತ್ರಾವತಿ ನದಿ 4.2 ಮೀಟರ್, ಫಲ್ಗುಣಿ ನದಿ 3.12 ಮೀಟರ್ ನೀರಿದೆ. ಮಳೆ ಕಾಡಿಮೆಯಾಗಿದ್ದರಿಂದ ಚಾರ್ಮಡಿ, ಬಿಸಿಲೆ, ಸಂಪಾಜೆ ಘಾಟ್ ರಸ್ತೆಯುದ್ದಕ್ಕೂ ದಿನವಿಡಿ ಮಂಜು ಆವರಿಸಿ ಸಂಚಾರ ಕಷ್ಟವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net