ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ

24 NRL 2
Published on

ನರೇಗಲ್ಲ: ರೈತರು ಸಾವಯವ ಗೊಬ್ಬರಕ್ಕಿಂತ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಇದು ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ವಿದ್ಯಾರ್ಥಿಗಳು ಈ ಬಗ್ಗೆ ತಿಳಿದುಕೊಂಡು ಪಾಲಕರಿಗೆ ಸಾವಯವ ಕೃಷಿ ಮಾಡಲು ಮತ್ತು ಸಾವಯವ ಗೊಬ್ಬರವನ್ನು ಬಳಸಲು ಒತ್ತಾಯಿಸಬೇಕು ಎಂದು ಸಾವಯವ ಕೃಷಿ ತಜ್ಞ ವೀರೇಶ ನೇಗಲಿ ಹೇಳಿದರು.

ಸಮೀಪದ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಂಬಾಕು ಮುಕ್ತ ದಿನಾಚರಣೆ, ಸಾವಯವ ಕೃಷಿ ಮತ್ತು ರಾಷ್ಟ್ರೀಯ ಗಣಿತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿಜ್ಞಾನ ಶಿಕ್ಷಕ ಕೆ.ಆರ್. ಹಾಳಕೇರಿ ಅವರು ತಂಬಾಕು ಸೇವನೆ ದೇಹದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದರ ವಿವರಣೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ವಿ.ಎಸ್. ಚಲವಾದಿ ಮಾತನಾಡಿದರು. ಆರ್.ಡಿ. ಜಗ್ಗಲ ಸ್ವಾಗತಿಸಿದರು. ಶಿಕ್ಷಕಿ ಟಿ.ಜಿ. ಕಂಬಾಳಿಮಠ ನಿರೂಪಿಸಿದರು. ರಾಜೇಶ್ವರಿ ನೀರಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net