ರೈತರ ಆರ್ಥಿಕ ಹೊರೆ ಕಡಿಮೆ ಮಾಡಿ

ಹೂವಿನಹಡಗಲಿ ತಹಸೀಲ್ದಾರ್ ಸಂತೋಷ್ ಕುಮಾರ್‌ಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಉಪಾಧ್ಯಕ್ಷ ವಿಠಲ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಶಿವರಾಜ, ವಿ.ಬಿ.ಚೆನ್ನಬಸಪ್ಪ, ಪಕ್ಕೀರಪ್ಪ ಇತರರಿದ್ದರು.

Published on

ಹೂವಿನಹಡಗಲಿ: ತಾಲೂಕಿನ ರೈತರು ಮುಂಗಾರು ಬಿತ್ತನೆ ಆರಂಭಿಸಿದ್ದು, ಸಕಾಲದಲ್ಲಿ ರಸಗೊಬ್ಬರ ಪೂರೈಕೆಗಾಗಿ ಕೊಟ್ಟೂರಿನಲ್ಲಿ ರೇಟ್ ಪಾಯಿಂಟ್ ಸ್ಥಾಪನೆ ಮಾಡಬೇಕು ಎಂದು ಕೃಷಿ ವಿಸ್ತರಣಾ ಕೇಂದ್ರದಲ್ಲಿ ತಹಸೀಲ್ದಾರ್ ಸಂತೋಷ್‌ಕುಮಾರ್‌ಗೆ ರಾಜ್ಯ ರೈತ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕ ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ರೇಟ್ ಪಾಯಿಂಟ್ ಇರುವ ಹಿನ್ನೆಲೆಯಲ್ಲಿ ಸಾಗಣೆ ವೆಚ್ಚ ಹೆಚ್ಚಾಗಲಿದೆ. ಸರ್ಕಾರ ನಿಗದಿಪಡಿಸಿದ ಬೆಲೆಗೆ ರಸಗೊಬ್ಬರ ಸಿಗುತ್ತಿಲ್ಲ. ರೈತರು ಮಾರಾಟಗಾರರನ್ನು ಪ್ರಶ್ನಿಸಿದರೆ ಸರಕು ವೆಚ್ಚ ಹೆಚ್ಚಾಗಿರುವುದರಿಂದ ಪ್ರತಿ ಚೀಲಕ್ಕೆ ಹೆಚ್ಚಿನ ದರ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಇದು ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ. ಕೂಡಲೇ ಕೊಟ್ಟೂರಿನಲ್ಲಿ ರಸಗೊಬ್ಬರ ರೇಟ್ ಪಾಯಿಂಟ್ ಆರಂಭಿಸಿಬೇಕು ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ವಿಠಲ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಶಿವರಾಜ, ಸದಸ್ಯರಾದ ಭೋಜಾ ನಾಯ್ಕ, ದುರುಗಪ್ಪ, ಗನಿಸಾಬ್, ವೆಂಕಟೇಶ, ಎಂ.ರೆಹಮಾನ್, ವಿ.ಬಿ.ಚೆನ್ನಬಸಪ್ಪ, ಪಕ್ಕೀರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net