

ಬೆಂಗಳೂರು: ಡೇರಿ ಉತ್ಪನ್ನಗಳ ಮೇಲೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಕಡಿತಗೊಳಿಸುವಂತೆ
ಭಾರತೀಯ ಡೇರಿ ಸಂಘ (ಐಡಿಎ)ದ ಅಧ್ಯಕ್ಷ ಡಾ.ಆರ್.ಎಸ್.ಸೋಧಿ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಐಡಿಎ ವತಿಯಿಂದ ನಗರದ ನಿಮ್ಹಾನ್ಸ್ ಕನ್ವೆನ್ಶನ್ ಸೆಂಟರ್ನಲ್ಲಿ ಆಯೋಜಿಸಿರುವ ಮೂರು ದಿನಗಳ "ದಕ್ಷಿಣ ಭಾರತ ಡೇರಿ ಶೃಂಗಸಭೆ'ಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ಟಿ ಕಡಿಮೆಗೊಳಿಸುವುದು, ಸಬ್ಸಿಡಿ ಆಧಾರದಲ್ಲಿ ರೈತರಿಗೆ, ಡೇರಿ ಉದ್ದಿಮೆಗಳಿಗೆ ಸಾಲ ನೀಡುವ ವ್ಯವಸ್ಥೆ ಕಲ್ಪಿಸುವುದು, ರೈತ ಕುಟುಂಬಗಳನ್ನು ಆದಾಯ ತೆರಿಗೆಯಿಂದ ಹೊರಗಿಡುವುದು ಹಾಗೂ ವಿದೇಶಗಳಿಂದ ಡೇರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳದಂತೆ ಸೇರಿ 7 ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಬರುವ ಬಜೆಟ್ನಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದರು. ಕೆಎಂಎಫ್ ಎಂಡಿ ಬಿ.ಶಿವಸ್ವಾಮಿ,ಸಂಘದ ಮಾಜಿ ಅಧ್ಯಕ್ಷ ಡಾ.ಆರ್.ಪಿ. ಅನೇಜ ಸೇರಿ ಮತ್ತಿತರರಿದ್ದರು.
2ನೇ ಸ್ಥಾನದಲ್ಲಿ ಕರ್ನಾಟಕ:
ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಸೇರಿ ದಣ ಭಾರತದ ರಾಜ್ಯಗಳು ದೇಶದ ಒಟ್ಟು ಹಾಲು ಉತ್ಪಾದನೆಯಲ್ಲಿ ಶೇ.25 ಪಾಲು ಹೊಂದಿವೆ. ದಣ ಭಾರತದಲ್ಲಿ ಆಂಧ್ರಪ್ರದೇಶ, ಕರ್ನಾಟಕ ಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಸ್ಥಾನದಲ್ಲಿವೆ. ಡೇರಿ ಉದ್ದಿಮೆ ಕ್ಷೇತ್ರದಲ್ಲಿ ದಣ ಭಾರತದ ರಾಜ್ಯಗಳು ಮುಂದುವರಿದಿವೆ. ಹಾಗಾಗಿ, ಈ ಉದ್ಯಮವನ್ನು ಇನ್ನಷ್ಟು ಬಲಪಡಿಸಲು ಹೊಸ ತಂತ್ರಜ್ಞಾನ ಅಳವಡಿಸಿಕೂಳ್ಳುವುದು ಮತ್ತು ಹೈನುಗಾರಿಕೆ ಅಭಿವೃದ್ಧಿ ಕುರಿತು ವಿಚಾರ ಮಂಡಿಸಲಾಗುತ್ತಿದೆ ಎಂದು ಐಡಿಎ ದಣ ವಿಭಾಗದ ಅಧ್ಯಕ್ಷ ಡಾ.ಸತೀಶ್ ಕುಲಕರ್ಣಿ ಹೇಳಿದ್ದಾರೆ. ಹೈನುಗಾರಿಕೆ ನಂಬಿ 10 ಕೋಟಿ ಕುಟುಂಬಗಳು ಜೀವನ ಸಾಗಿಸುತ್ತಿವೆ. ರೈತರನ್ನು ಇನ್ನಷ್ಟು ಸ್ವಾವಲಂಬಿಯನ್ನಾಗಿಸಲು ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.