ಪದವಿ ಪರೀಕ್ಷಾ ಶುಲ್ಕ ಕಡಿಮೆ ಮಾಡಿ

ಸಿಂಧನೂರಿನಲ್ಲಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಶಿವಯ್ಯಗೆ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ದುರುಗೇಶ ಕಲ್ಮಂಗಿ,ಚನ್ನಬಸವ ಯಾಪಲಪರ್ವಿ, ಶರಣಬಸವ ಕಲ್ಮಂಗಿ, ಉಮೇಶ ಕಲ್ಮಂಗಿ ಇತರರಿದ್ದರು.
ಸಿಂಧನೂರಿನಲ್ಲಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಶಿವಯ್ಯಗೆ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ದುರುಗೇಶ ಕಲ್ಮಂಗಿ,ಚನ್ನಬಸವ ಯಾಪಲಪರ್ವಿ, ಶರಣಬಸವ ಕಲ್ಮಂಗಿ, ಉಮೇಶ ಕಲ್ಮಂಗಿ ಇತರರಿದ್ದರು.
Published on

ಸಿಂಧನೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ (ರಾಯಚೂರು ವಿವಿ) ವ್ಯಾಪ್ತಿಗೆ ಒಳಪಡುವ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಕಡಿತಗೊಳಿಸುವಂತೆ ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿಯಿಂದ ಮಂಗಳವಾರ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಶಿವಯ್ಯಗೆ ಮನವಿ ಸಲ್ಲಿಸಲಾಯಿತು.

ಈಗಾಗಲೇ ರಾಯಚೂರು ವಿವಿ ವ್ಯಾಪ್ತಿಗೆ ಒಳಪಡುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ ನಿಗದಿಪಡಿಸಿದ್ದು, ಯುಯುಸಿಎಂಎಸ್ ವೆಬ್‌ಸೈಟ್‌ನಲ್ಲಿ ಪಾವತಿಸಬೇಕಾಗಿದೆ. ಆದರೆ, ವಿವಿಯಿಂದ ಹೊರಡಿಸಿರುವ ಅಧಿಸೂಚನೆಯಲ್ಲಿ ಬಿಎ, ಬಿಕಾಂ, ಬಿಬಿಎ ಮತ್ತು ಬಿಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ 1690 ರೂ. ಹಾಗೂ ಬಿಎಸ್ಸಿ ಮತ್ತು ಬಿಸಿಎಗೆ 1810 ರೂ., ಸ್ನಾತಕೋತ್ತರ ವಿಭಾಗದ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್‌ಗೆ 1760 ರೂ. ಪಾವತಿಸಬೇಕಾಗಿದೆ. ಆದರೆ, ವಿಶ್ವವಿದ್ಯಾಲಯದ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2 (ಎ), ಪ್ರವರ್ಗ 2(ಬಿ), ಪ್ರವರ್ಗ-3 (ಎ), ಪ್ರವರ್ಗ-3 (ಬಿ) ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದರೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು ಎಂದು ಅಧಿಸೂಚನೆ ಹೊರಡಿಸಿದ್ದರೂ ಯುಯುಸಿಎಂಎಸ್ ವೆಬ್‌ಸೈಟ್‌ನಲ್ಲಿ ಯಾವುದೇ ವಿನಾಯಿತಿ ನೀಡದಂತೆ ಒಟ್ಟು ಮೊತ್ತ ಪಾವತಿಸಬೇಕೆಂದು ತಿಳಿಸಲಾಗಿದೆ. ಕೂಡಲೇ ಶುಲ್ಕ ಕಡಿತಗೊಳಿಸಿ ಆದೇಶಿಸಬೇಕೆಂದು ಆಗ್ರಹಿಸಿದರು.

ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷ ದುರುಗೇಶ ಕಲ್ಮಂಗಿ, ಜಿಲ್ಲಾ ಉಪಾಧ್ಯಕ್ಷ ಚನ್ನಬಸವ ಯಾಪಲಪರ್ವಿ, ತಾಲೂಕು ಉಪಾಧ್ಯಕ್ಷ ಶರಣಬಸವ ಕಲ್ಮಂಗಿ, ವಿದ್ಯಾರ್ಥಿಗಳಾದ ಮಹೇಶ್ ನಾಯಕ್, ವೆಂಕನಗೌಡ, ಸಂತೋಷ, ರಮೇಶ, ಹನುಮೇಶ, ಬಸವರಾಜ, ವಿನೋದ, ಅಯ್ಯನಗೌಡ, ಸಹನಾ, ನೇತ್ರಾ, ಪೂಜಾ, ಪೂರ್ಣಿಮಾ, ಶಿಲ್ಪಾ ಮಹೇಶ್ವರಿ, ಶ್ವೇತಾ, ಜಯಶ್ರೀ, ಪ್ರಮುಖರಾದ ಉಮೇಶ ಕಲಮಂಗಿ, ವಿರೂಪಾಕ್ಷಿ ಸಾಸಲಮರಿ, ಉಮೇಶ ಸುಕಾಲಪೇಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net