

ಚಿಕ್ಕಮಗಳೂರು: ಕೃಷಿ ವಿಜ್ಞಾನ ಕೇಂದ್ರಗಳಿAದ ತಾಂತ್ರಿಕ ಮಾಹಿತಿ ಪಡೆದು ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಂಡಾಗ ಕೃಷಿಯಲ್ಲಿ ಹೆಚ್ಚಿನ ಲಾಭಪಡೆಯಬಹುದು ಎಂದು ಜೋಡಿಲಿಂಗದಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಎಲ್.ಎಚ್.ಬೀರೇಗೌಡ ಅಭಿಪ್ರಾಯಪಟ್ಟರು.
ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಿAದ ಬೀರನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕೃಷಿಯಲ್ಲಿ ಆದಾಯ ದ್ವಿಗುಣಗೊಂಡ ರೈತರ ಸಭೆಯಲ್ಲಿ ತಮ್ಮ ಅನುಭವ ಹಂಚಿಕೊAಡ ಅವರು, ತಮ್ಮ ಆದಾಯ ವೃದ್ಧಿಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಮಹತ್ವದ ಪಾತ್ರ ವಹಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೆಕ್ಕೆಜೋಳದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸೈನಿಕ ಹುಳು ನಿಯಂತ್ರಣಕ್ಕಾಗಿ ಬೀಜೋಪಚಾರ ಮಾಡಲು ಸಲಹೆ ನೀಡಿ, ಪ್ರಾತ್ಯಕ್ಷಿಕೆಯನ್ನು ಸಹ ಕೈಗೊಂಡಿದ್ದರು. ಇದರಿಂದಾಗಿ ರೈತರಿಗೆ ಸೈನಿಕ ಹುಳುವಿನಿಂದ ಮುಕ್ತಿ ದೊರೆತಿದೆ ಎಂದು ತಿಳಿಸಿದರು.
ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಎ.ಟಿ.ಕೃಷ್ಣಮೂರ್ತಿ ಅವರು ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸುವ ಪ್ರಾಯೋಜನೆಯ ಕುರಿತು ಮಾಹಿತಿ ನೀಡಿದರು. ರೈತರು ಏಕ ಬೆಳೆ ಪದ್ಧತಿ ಮಾಡುವುದರ ಬದಲು ಸಮಗ್ರ ಕೃಷಿ ಪದ್ಧತಿ ಅಳವಡಿಸುವುದರಿಂದ ಆದಾಯ ದ್ವಿಗುಣಗೊಳಿಸುವುದರ ಜೊತೆಗೆ ನಿರಂತರ ಮತ್ತು ಸುಸ್ಥಿರ ಆದಾಯಗಳಿಸಬಹುದು ಎಂದು ರೈತರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೩೫ ಜನ ರೈತರಿಗೆ ಕೇಂದ್ರದ ಬೇಸಾಯ ಶಾಸ್ತçದ ವಿಜ್ಞಾನಿ ಡಾ.ಎಂ.ವೈ.ಉಲ್ಲಾಸ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಬೀರನಹಳ್ಳಿ ಗ್ರಾಮದ ಹಿರಿಯರಾದ ಶಂಬೇಗೌಡ ಉದ್ಘಾಟಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ್ದ ಎಲ್ಲ ರೈತರಿಗೂ ವಿವಿಧ ಹಣ್ಣಿನ ಜಾತಿಯ ಗಿಡಗಳನ್ನು ವಿತರಿಸಲಾಯಿತು.