4.15 ಕೋಟಿ ರೂಪಾಯಿ ಮೌಲ್ಯದ ರಕ್ತಚಂದನ ವಶ

Raktachandana moodbidri
Published on

ಮಂಗಳೂರು: ಮಲೇಷಿಯಾ ಶಿಂಗಾಪುರಕ್ಕೆ ಸಾಗಾಟ ಮಾಡಲು ಮಂಗಳೂರಿನ ಎನ್‌ಎಂಪಿಟಿ ಮೂಲಕ ಕೊಂಡೊಯ್ಯಲು ಬೃಹತ್ ಲಾರಿಯಲ್ಲಿ ಸಾಗಿಸುತ್ತಿದ್ದ 4.15 ಕೋಟಿ ರೂಪಾಯಿ ಮೌಲ್ಯದ ರಕ್ತಚಂದನವನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

ಬೃಹತ್‌ಜಾಲವನ್ನು ಬೆನ್ನಟ್ಟಿದ ಅರಣ್ಯ ವಿಚಕ್ಷಣ ದಳ ಉಡುಪಿ, ಮಂಗಳೂರು ವಿಭಾಗ ಮೂಲ್ಕಿಯ ಕಿಲ್ಪಾಡಿ ಕೆಂಚನಕೆರೆ ಎಂಬಲ್ಲಿ ರಕ್ತಚಂದನ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ಆಂಧ್ರಪ್ರದೇಶದಿಂದ ಕಡಿದು ತರಲಾದ ರಕ್ತಚಂದನ 316ಕೊರಡು (8308.400 ಕೆ.ಜಿ.) ಆಂಧ್ರ ಮೂಲದ ಲಾರಿ ಹಾಗೂ ತಮಿಳುನಾಡು ಮೂಲದ ಕಾರು ವಶಕ್ಕೆ ಪಡೆಯಲಾಗಿದೆ. ಕಾರು ರಕ್ತಚಂದನ ಸಾಗಿಸುತ್ತಿದ್ದ ಲಾರಿಗೆ ಬೆಂಗಾವಲಾಗಿತ್ತು.
7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆ ನಡೆದ ಸ್ಥಳ ಮೂಡುಬಿದಿರೆ ವಲಯ ಅರಣ್ಯ ಇಲಾಖೆ ವ್ಯಾಪ್ತಿಯಾಗಿರುವುದರಿಂದ ಆರೋಪಿ ಸಹಿತ ಸೊತ್ತುಗಳನ್ನು ಮೂಡುಬಿದಿರೆಗೆ ಕರೆತರಲಾಗಿದೆ. ಕಾರ್ಯಾಚರಣೆ ನೇತೃತ್ವವನ್ನು ವಿಚಕ್ಷಣಾ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net