ಸಾರ್ವಜನಿಕರ ಕುಂದು-ಕೊರತೆ ನಿವಾರಿಸಿ

Published on

ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಅಭಿಮತ ಜನಸ್ಪಂದನದಲ್ಲಿ ಅರ್ಹರಿಗೆ ಆದೇಶ ಪತ್ರ ವಿತರಣೆ

ವಿಜಯವಾಣಿ ಸುದ್ದಿಜಾಲ ಚೇಳೂರು

ಸಾರ್ವಜನಿಕರ ಕುಂದು&ಕೊರತೆ ನಿವಾರಿಸಿ, ಸರ್ಕಾರಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಿದ್ದಾರೆ ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಹೇಳಿದರು.

ತಾಲೂಕಿನ ಪುಲ್ಲಗಲ್ಲುನಲ್ಲಿ ಕಂದಾಯ ಇಲಾಖೆ, ತಾಪಂ, ಗ್ರಾಪಂ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನದಲ್ಲಿ

ಶಾಸಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕಂದಾಯ, ಸರ್ವೇ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಆದೇಶದ ಪತ್ರ ವಿತರಿಸಿ ಮಾತನಾಡಿದರು.

ಪುಲ್ಲಗಲ್ಲು ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸಿದ್ದೇವೆ. ಶಾಸಕನಾಗಿ ಬೆಳೆಯಲು ಕಾರಣ ಪಾಲಕರು ನೀಡಿದ ವಿದ್ಯಾಭ್ಯಾಸ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಟ್ಟು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು.

ಪುಲ್ಲಗಲ್ಲು, ಊದವಾರಪಲ್ಲಿ, ಶ್ರೀನಿವಾಸಪುರ, ಮಿದ್ದಿಲು, ಗಾಂದೀಪುರ, ರಾಗಿಮ್ಯಾಕಲಪಲ್ಲಿ ಸೇರಿ ಹತ್ತಾರು ಗ್ರಾಮಗಳಿಂದ ಜನರು ಭಾಗವಹಿಸಿದ್ದರು. 77ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದು, ಗ್ಯಾರಂಟಿ ಯೋಜನೆ, ರಸ್ತೆ, ನಿವೇಶನ, ವಸತಿ, ಪಡಿತರ ಚೀಟಿ, ಸಾರಿಗೆ, ಕುಡಿಯುವ ನೀರಿನ ಸಮಸ್ಯೆ ಸೇರಿ ಮೂಲ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದರು.ಆಹಾರ ಇಲಾಖೆಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಕೃಷಿ ಇಲಾಖೆ ಯಂತ್ರೋಪಕರಣ ಸೇರಿ ಹಲವು ಇಲಾಖಾ ಯೋಜನೆ ಫಲಾನುಭವಿಗಳಿಗೆ ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ 30ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಜತೆಗೆ ಪೌಷ್ಟಿಕ ಆಹಾರದ ಕುರಿತು ಜಾಗೃತಿ ಮೂಡಿಸಲಾಯಿತು.

ತಹಸೀಲ್ದಾರ್​ ಶ್ವೇತಾಗೆ ಸಂಬಂಧಿಸಿದ ಕೆಲ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ, ಆದೇಶ ಪತ್ರ ನೀಡಲು ಸಿಬ್ಬಂದಿಗೆ ಶಿಫಾರಸು ಮಾಡಿದರು.

ಗ್ರಾಮದ ದೇವಾಲಯಕ್ಕೆ ಸೌಂಡ್​ ಸಿಸ್ಟಮ್​, ಹಾಮೋರ್ನಿಯಂ, ಇತರ ಭಜನೆ ಸಾಮಗ್ರಿ, ಆರ್ಥಿಕ ಸಹಾಯ ಮಾಡಿದರು. ವಿವಿಧ ಸ್ತ್ರೀ ಶಕ್ತಿ ಸಹಾಯ ಗುಂಪುಗಳಿಗೆ 40 ಲಕ್ಷ ರೂ.ಚೆಕ್​ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net