ಅನ್ಯಾಯ ಸರಿಪಡಿಸಿ ಅಭಿವೃದ್ಧಿಗೆ ಒತ್ತು

FotoJet 3333
Published on

ವೇಮಗಲ್​: ವೇಮಗಲ್​, ನರಸಾಪುರ ಭಾಗದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಲಾಗುವುದು. ಕೆಲ ಯೋಜನೆಗಳು ಅಭಿವೃದ್ಧಿಯಾಗದಿರುವ ಬಗ್ಗೆ ಮಾಹಿತಿ ಇದ್ದು, ಅದನ್ನು ಸರಿಪಡಿಸಲಾಗುವುದು ಎಂದು ವೇಮಗಲ್​, ನರಸಾಪುರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಉರಟಿ ಅಗ್ರಹಾರ ಚೌಡರೆಡ್ಡಿ ಹೇಳಿದರು.

ಕೋಲಾರ ತಾಲೂಕು ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಅವರು,ಅಕ್ರಮ ಸಕ್ರಮ ಲೇಔಟ್​ಗಳಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸುವ ಜತೆಗೆ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಯೋಜನಾ ಪ್ರಾಧಿಕಾರದ ವಿಸ್ತೀರ್ಣ ಸುಮಾರು 65 ಸಾವಿರ ಎಕರೆ ಇದ್ದು, ಇದನ್ನು ಯೆಲ್ಲೋ ಜೋನ್​, ರೆಡ್​ ಜೋನ್​, ಗ್ರೀನ್​ ಜೋನ್​ಗಳಾಗಿ ಗುರುತಿಸಾಲಾಗುವುದು ಎಂದರು.

ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಸ್ವಾಮೀಜಿ, ಬಿ.ನಾಗರಾಜ್​, ಆರ್​.ಎನ್​.ಶಿವಕುಮಾರ್​, ಸಿ.ಎನ್​.ಚೌಡಪ್ಪ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿ.ಎಂ.ಮುನಿಯಪ್ಪ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಎನ್​.ಮುರಳಿ, ಸೈಯದ್​ ಅಪ್ಸರ್​, ಕೋಮುಲ್​ ನಿರ್ದೇಶಕ ಚಂಜಿಮಲೆ ರಮೇಶ್​, ಕೋಲಾರ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಪಟ್ಟಣ ಪಂಚಾಯತಿ ಸದಸ್ಯರಾದ ದೀಪಾ ವಿನಯ್​, ಶಶಿಕಲಾ ನಾಗೇಶ್​, ಪುರಹಳ್ಳಿ ಗಂಗಪ್ಪ, ಅಂಜಲಿ ಪ್ರಕಾಶ್​, ತಾಸೂಪ್​ ಖಾನ್​, ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಮುಖಂಡರಾದ ಪುರಹಳ್ಳಿ ಶ್ರೀನಿವಾಸ್​, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್​, ನವೀನ್​ ಕುಮಾರ್​, ಪೆರ್ಜೇನಹಳ್ಳಿ ನಾಗೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net