ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಗೆ ಮೊದಲ ಸಲ ಚುನಾವಣೆ

WhatsApp Image 2025-10-25 at 6.36.18 PM
Published on

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಗೆ ಇತಿಹಾಸದಲ್ಲಿಯೇ ಮೊದಲ ಸಲ ಚುನಾವಣೆ ನಡೆಯುತ್ತಿದ್ದು, ಕಣದಲ್ಲಿರುವ 26 ಅಭ್ಯರ್ಥಿಗಳ ಪೈಕಿ, ಹೊಸಬರ 10 ಜನರ ಪೆನಲ್ ಮಾಡಿಕೊಂಡು ಕಣದಲ್ಲಿದ್ದೇವೆ ಎಂದು ಅಭ್ಯರ್ಥಿ ಅನಿಲ ಚೌಗುಲೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 30ರಂದು ಬಿಮ್ಸ್ ಆವರಣದಲ್ಲಿನ ಬಿಐಎಂಎಸ್ ಸಭಾಭವನದಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಇರಲಿದೆ. ನಮ್ಮ ಪೆನಲ್‌ದಲ್ಲಿರುವ ಯಾರೂ ಈವರೆಗೆ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿಲ್ಲ. ಸಂಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುವ ಉದ್ದೇಶದಿಂದ ಹೊಸಬರ ತಂಡ ತಂಡ ಸ್ಪರ್ಧೆಗಿಳಿದಿದ್ದೇವೆ ಎಂದರು.

ಇನ್ನೋರ್ವ ಅಭ್ಯರ್ಥಿ ವಿನಾಯಕ ಗೋಟ್ಖಿಂಡಿ ಮಾತನಾಡಿ, ಅವಿರೋಧವಾಗಿಯೇ ಆಯ್ಕೆಯಾಗುತ್ತ ಬಂದಿದೆ. ಆದರೆ ಈಚೆಗೆ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಚುನಾವಣೆ ಮೂಲಕವೇ ಕಾರ್ಯಕಾರಿ ಸಮಿತಿಯ 10 ಸ್ಥಾನ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಎಲ್ಲರೂ ಚುನಾವಣೆಗೆ ಮುಂದಾಗಿದ್ದೇವೆ. 3000 ಸದಸ್ಯ ಮತದಾರರಿದ್ದು, ಒಬ್ಬರು 10 ಮತ ಚಲಾಯಿಸಬೇಕು. ಆಯ್ಕೆಯಾದ 10 ಸದಸ್ಯರಲ್ಲಿಯೇ ನಂತರ ಪದಾಧಿಕಾರಿಗಳ ಆಯ್ಕೆಯಾಗಲಿದೆ ಎಂದು ಮಾಹಿತಿ ನೀಡಿದರು.

ಕೆಂಪಣ್ಣ ಗೋಣಿ, ಗಿರೀಶ ಬುಡರಕಟ್ಟಿ, ಪ್ರಶಾಂತ ಕೋಣೆ, ಮಂಜುನಾಥ ಪಟ್ಟಣಶೆಟ್ಟಿ, ಶಿವಲಿಂಗ ಹಂಚಿನಾಳ ಸುದ್ದಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net