ದೇಶದಲ್ಲಿ ಒಂದೂವರೆ ಮಿಲಿಯ ಯುನಿಟ್​ ರಕ್ತ ಕೊರತೆ

udp-16-redcross
Published on

ಉಡುಪಿ: ಭಾರತದಲ್ಲಿ 139 ಕೋಟಿ ಜನಸಂಖ್ಯೆ ಇದ್ದರೂ ಹೆಚ್ಚು ಕಡಿಮೆ ಒಂದುವರೆ ಮಿಲಿಯ ಯುನಿಟ್​ ರಕ್ತದಾನದ ಕೊರತೆ ಇರುವುದರಿಂದ, ಯುವಕ ಯುವತಿಯರು ಸದಾ ಸ್ವಯಂ ಪ್ರೇರಿತ ರಕ್ತದಾನ ಮಾಡಿ, ರೋಗಿಗಳಿಗೆ ಅಗತ್ಯವಿರುವ ರಕ್ತದ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಉಡುಪಿ ಜಿಲ್ಲಾ ಶಾಖೆಯ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ಹೇಳಿದರು.

ಉಡುಪಿಯ ಸೈಂಟ್​ ಮೆರೀಸ್​ ಇಂಗ್ಲೀಷ್​ ಮಿಡಿಯಂ ಸ್ಕೂಲ್​ನ ಆವೆ ಮರಿಂಯ ಹಾಲ್​ನ ಮದರ್​ ಆಫ್​ ಸೋರೋಸ್​ ಚರ್ಚ್​ನಲ್ಲಿ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ, ಉಡುಪಿ ಜಿಲ್ಲಾ ಶಾಖೆ, ಸೈಂಟ್​ ಮೆರೀಸ್​ ಇಂಗ್ಲೀಷ್​ ಮಿಡಿಯಂ ಸ್ಕೂಲ್​, ಲಯನ್ಸ್​ ಕ್ಲಬ್​ ಉಡುಪಿ ಮಿಡ್​ಟೌನ್​, ಲಯನ್ಸ್​ ಕ್ಲಬ್​ ಉಡುಪಿ ಪ್ರಕೃತಿ, ವಿಜಯ ಬ್ಯಾಂಕ್​ ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಮಣಿಪಾಲ ಸಹಯೋಗದೊಂದಿಗೆ ನಡೆದ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿ, ಮಾತನಾಡಿದರು.

ಸೈಂಟ್​ ಮೆರೀಸ್​ ವಿದ್ಯಾಸಂಸ್ಥೆಯ ಸಂಚಾಲಕ ಚಾರ್ಲಸ್​ ಮೆನೆಜಸ್​ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಜೋನ್ಸನ್​ ಎಲ್​. ಸಿಕ್ವೇರಾ, ಉಪಪ್ರಾಂಶುಪಾಲ ಗ್ರೇಟ್ಟಾ ಕ್ವಾಡ್ರಸ್​, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಮೆಡಿಕಲ್​ ಆಫೀಸರ್​ ಡಾ. ದೀಪ್​ , ವೀಣಾ ಶೆಟ್ಟಿ, ಅನಂತ ಶೆಟ್ಟಿ, ವಿ. ಸುಧಾಕರ್​ ಶೆಟ್ಟಿ, ಜ್ಯೋತಿ ಆರ್​ ಶೆಟ್ಟಿ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ 70 ಯೂನಿಟ್​ ರಕ್ತವನ್ನು ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net