ಕೆಂಪು ಸಕ್ಕರೆ, ಬೆಳ್ಳಿ ತೊಟ್ಟಿಲು ಸಮರ್ಪಣೆ

ಕುರುಗೋಡಿನ ಕಲ್ಲುಕಂಬ ಗ್ರಾಮದಲ್ಲಿ ಮೊಹರಂ ನಿಮಿತ್ತ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿರುವುದು.
ಕುರುಗೋಡಿನ ಕಲ್ಲುಕಂಬ ಗ್ರಾಮದಲ್ಲಿ ಮೊಹರಂ ನಿಮಿತ್ತ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿರುವುದು.
Published on

ಕುರುಗೋಡು: ಕಲ್ಲುಕಂಬ, ಮುಷ್ಟಗಟ್ಟೆ, ಚಿಟಿಗಿನಹಾಳ, ಸೋಮಲಾಪುರ ಗ್ರಾಮದಲ್ಲಿ ದಶಕದಿಂದ ಹಿಂದುಗಳೇ ಮೊಹರಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸುತ್ತಿರುವುದು ವಿಶೇಷ.

ಎಚ್.ವೀರಾಪುರ, ಕೆರೆಕೆರೆ ಗ್ರಾಮದ ಮುಸ್ಲಿಂ ಕುಟುಂಬಗಳು ಆಗಮಿಸಿ ಸ್ಥಳೀಯ ಹಿಂದುಗಳ ಸಹಕಾರದಿಂದ ಮಸೀದಿಯಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸುತ್ತಾರೆ. ಅಲಾಯಿ ದೇವರಿಗೆ ಹರಕೆ ಹೊತ್ತವರು ಕೆಂಪು ಸಕ್ಕರೆ, ಬೆಳ್ಳಿ ತೊಟ್ಟಿಲು, ಛತ್ರಿ, ಕುದುರೆ, ಹೂವಿನಹಾರ, ಬಟ್ಟೆ ಅರ್ಪಿಸುತ್ತಿದ್ದಾರೆ. ಮೊಹರಂ ಕೊನೆಯ ದಿನ ಗೆಜ್ಜೆ ಕುಣಿತ, ಆಲಾಯಿ ಕುಣಿತ, ಹುಲಿ, ಮಹಿಳೆಯರ ವೇಷ ಧರಿಸಿ ಕುಣಿಯಲಾಗುತ್ತದೆ. ಕತ್ತಲ್ ರಾತ್ರಿ ದಿನ ಕುಂಬಾರರಿಂದ ಮಣ್ಣಿನ ಮಡಿಕೆ ಖರೀದಿಸಿ ಅದರಲ್ಲಿ ಬೆಲ್ಲದ ಪಾನಕ, ರೊಟ್ಟಿ, ಸಕ್ಕರೆಯನ್ನು ದೇವರಿಗೆ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net