ಅಡಕೆಗೆ ಕೆಂಪುನುಸಿ ಬಾಧೆ

Adake
Published on

ಹಾನಗಲ್ಲ: ಬಿಸಿಲಿನ ತೀವ್ರತೆಗೆ ಅಡಕೆ ಮರಗಳಲ್ಲಿ ಕೆಂಪು ನುಸಿ ಬಾಧೆ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಅಡಕೆಗೆ ಪಶ್ಚಿಮದ ಬಿಸಿಲು ನಿರಂತರವಾಗಿ ಬಿದ್ದಾಗ ಎಲೆಗಳು ಹಳದಿಯಾಗುವಿಕೆ ಹಾಗೂ ಸುಡುವಿಕೆ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಪ್ರಸ್ತುತ ಕಾಣಿಸಿಕೊಂಡಿರುವ ಜೇಡನುಸಿ (ಕೆಂಪು ನುಸಿ ಬಾಧೆ) ಬಾಧೆಯೂ ಇದೇ ಮಾದರಿಯಲ್ಲಿ ಕಂಡುಬಂದಿದೆ. ಮಳೆ ಬಿದ್ದ ನಂತರ ಸಸಿಗಳು ಸುಟ್ಟ ರೀತಿಯಲ್ಲಿ ಕಂಡುಬರುತ್ತಿವೆ. ರೋಗ ದಿನೇದಿನೆ ಉಲ್ಬಣಗೊಳ್ಳುತ್ತಿದೆ.

ಅಡಕೆ ಬೆಳೆಗೆ ಪ್ರಮುಖವಾಗಿ ಕೆಂಪು ಹಾಗೂ ಬಿಳಿ ಜಾತಿಯ ಜೇಡನುಸಿ ಬಾಧಿಸುತ್ತಲಿದ್ದು, ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತನಕ ರೋಗದ ಲಕ್ಷಣಗಳು ಕಂಡುಬರುತ್ತವೆ. 1ರಿಂದ 4 ವರ್ಷದ ಸಸಿಗಳು ಹೆಚ್ಚು ಬಾಧೆಗೆ ಒಳಪಡುತ್ತವೆ. ಕೆಂಪುನುಸಿ ರೋಗದಲ್ಲಿ ಮರಿ ಹಾಗೂ ಪ್ರೌಢ ನುಸಿಗಳು ಗರಿಗಳ ತಳಭಾಗದಲ್ಲಿ ಕುಳಿತು ರಸ ಹೀರುವುದರಿಂದ ಸಣ್ಣ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಬಳಿಕ ಎಲೆ ಹಳದಿಯಾಗಿ ಸುಟ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಎಲೆಗಳ ತಳಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಜೇಡರ ಬಲೆಯ ಲಕ್ಷಣಗಳು ಗೋಚರಿಸಲಿದ್ದು, ಗರಿಯ ತಳಭಾಗವನ್ನು ಬೆರಳಿನಿಂದ ಉಜ್ಜಿದಾಗ ಕೆಂಪುನುಸಿ ಬಾಧೆ ಇದ್ದರೆ ಕುಂಕುಮದ ರೀತಿಯ ಪುಡಿ ಬೆರಳಿಗೆ ಅಂಟಿಕೊಳ್ಳುತ್ತದೆ. ಈ ಜೇಡನುಸಿಗಳ ಬಾಧೆ ಮಳೆ ಹೆಚ್ಚಾದಂತೆ ಕಡಿಮೆಗೊಳ್ಳಲಿದ್ದು, ಸದ್ಯ ಮಳೆ ಕಡಿಮೆಯಾದ ಮತ್ತು ಅಧಿಕ ತಾಪಮಾನದ ಕಾರಣ ಬಾಧೆ ಹೆಚ್ಚು ಕಂಡು ಬರುತ್ತಿದೆ. ರೋಗದ ನಿಯಂತ್ರಣಕ್ಕಾಗಿ ಬಾಧೆಗೆ ಒಳಗಾದ ಗರಿಗಳನ್ನು ಕತ್ತರಿಸಿ ಕೀಟನಾಶಕ ಸಿಂಪಡಿಸಬೇಕು.

ನಿಯಂತ್ರಣ ಕ್ರಮಗಳು

ಒಂದು ಲೀಟರ್ ನೀರಿಗೆ 1.5 ///ಕ್ಟೃಟಛ್ಟಿಜಜಿಠಿಛಿ // 57% ಉಇ ಅಥವಾ ಒಂದು ಲೀಟರ್ ನೀರಿಗೆ 1 ಎಂಎಲ್ ಖಜ್ಟಿಟಞಛಿಜ್ಛಿಛ್ಞಿ 240 ಖಇ ಅಥವಾ 1 ಲೀಟರ್ ನೀರಿಗೆ 1.25 ಎಂ.ಎಲ್‌ನಂತೆ ಏಛ್ಡಿಠಿಜಿಚ್ಢಟ್ಡ 5.45 ಉಇ + ಕ್ಟೃಟಛ್ಟಿಜಜಿಠಿಛಿ 57% ಉ್ಚ ರಾಸಾಯನಿಕಗಳನ್ನು ಸೂಕ್ಷ್ಮ ಪೋಷಕಾಂಶದ (25ರಿಂದ 50 ಗ್ರಾಂ. ಪ್ರತಿ ಕ್ಯಾನ್‌ಗೆ) ಜೊತೆಗೆ ಬೆರೆಸಿ ಎಕರೆಗೆ 10ರಿಂದ 15 ಕ್ಯಾನ್‌ಗಳನ್ನು ಎಲೆಯ ಹಿಂಬದಿಗೆ ಸಿಂಪಡಿಸುವುದರ ಮೂಲಕ ಕೆಂಪು ನುಸಿಯ ಬಾಧೆ ಹತೋಟಿಗೆ ತರಬಹುದು ಎಂದು ಮಂಜುನಾಥ ಬಣಕಾರ ಸಲಹೆ ನೀಡಿದ್ದಾರೆ.

ಮುಂಜಾಗ್ರತೆಯಾಗಿ ತೋಟದಲ್ಲಿ ತೇವಾಂಶ ವಾತಾವರಣವನ್ನು ತುಂತುರು ಅಥವಾ ಹನಿ ನೀರಾವರಿ ಮೂಲಕ ಹೆಚ್ಚಿಸುವುದು, ತೋಟದಲ್ಲಿ ಸರಿಯಾದ ಬಸಿಗಾಲುವೆ ನಿರ್ಮಿಸುವುದು ಪ್ರಮುಖವಾಗಿದೆ. ಈಗಾಗಲೇ ಕೆಂಪುನುಸಿ ಬಾಧೆಗೆ ಒಳಪಟ್ಟಿರುವ ತೋಟಗಳಿಗೆ ರಾಸಾಯನಿಕ ಸಿಂಪಡಣೆಯಿಂದ ಹತೋಟಿ ಮಾಡಿಕೊಳ್ಳಬಹುದು.i ಮಂಜುನಾಥ ಬಣಕಾರ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net