ಮಾ.7 ರಿಂದ 9 ರವರೆಗೆ  ‘ರೆಡ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯ

WhatsApp Image 2025-03-06 at 11.46.21 AM
Published on

ರೆಡ್ ಎಫ್‌ಎಂ 93.5 ರೇಡಿಯೋ ಚಾನಲ್ ವತಿಯಿಂದ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಮಾ.7 ರಿಂದ 9 ರವರೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ‘ರೆಡ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ.

ಮಾ.7 ರಂದು ಬೆಳಗ್ಗೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಡಿಸಿಪಿ ಮುತ್ತುರಾಜ್ ಕ್ರಿಕೆಟ್ ಪಂದ್ಯ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದ್ದು, ಲೀಗ್, ರೌಂಡ್ ರಾಬಿನ್, ಫೈನಲ್ ಸೇರಿದಂತೆ ಒಟ್ಟು 25 ಪಂದ್ಯ ನಡೆಯಲಿವೆ. ಪ್ರತಿ ಪಂದ್ಯಕ್ಕೆ 8 ಓವರ್‌ಗಳನ್ನು ನಿಗದಿ ಮಾಡಲಾಗಿದ್ದು, ಎಲ್‌ಬಿಡಬ್ಲುೃ ಮತ್ತು ಲೆಗ್ ಬೈಸ್, ಥ್ರೋ ಬೌಲಿಂಗ್‌ಗಳನ್ನು ನಿಷೇಧಿಸಲಾಗಿದೆ. ಎಲ್ಲ ತಂಡಗಳು ನಿಗದಿತ ಓವರ್‌ಗಳನ್ನು 35 ನಿಮಿಷದಲ್ಲಿ ಪೂರ್ಣಗೊಳಿಸಬೇಕಾಗಿದ್ದು, ಇಲ್ಲವಾದರೆ ಸದರಿ ತಂಡಕ್ಕೆ ದಂಡ ಬೀಳಲಿದೆ.

12 ತಂಡಗಳನ್ನು ತಲಾ ನಾಲ್ಕು ತಂಡಗಳಂತೆ ಮೂರು ವಿಭಾಗ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ ಪ್ರತಿ ತಂಡ ತಲಾ ಮೂರು ಲೀಗ್ ಪಂದ್ಯಗಳನ್ನು ಆಡಲಿವೆ. ಆಯಾಯಾ ವಿಭಾಗದ ಪಾಯಿಂಟ್ ಟೇಬಲ್‌ನಲ್ಲಿ ಮೊದಲ ಸ್ಥಾನ ಪಡೆಯುವ ತಂಡ ಮುಂದಿನ ಹಂತಕ್ಕೆ ಹೋಗಲಿವೆ. ಬಳಿಕ ರೌಂಡ್ ರಾಬಿನ್ ಪ್ರವೇಶಿಸುವ ಮೂರು ತಂಡಗಳು ತಲಾ ಎರಡು ಪಂದ್ಯ ಆಡಲಿದ್ದು, ಎರಡು ತಂಡ ಫೈನಲ್ ಪ್ರವೇಶಿಸಲಿವೆ ಎಂದು ರೆಡ್ ಎಫ್‌ಎಂ ಕೆ.ವಿ.ಚೇತನ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net