ಮುಮ್ಮಿಗಟ್ಟಿಯಲ್ಲಿ ಸೆರೆ ಸಿಕ್ಕ ಕೆಂಪು ಕೋತಿ

22 Dwd 4
Published on

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಕೆಲ ದಿನಗಳಿಂದ ಬೀಡು ಬಿಟ್ಟು, ಜನರ ಮೇಲೆ ದಾಳಿ ಮಾಡುತ್ತಿದ್ದ ಕೆಂಪು ಕೋತಿ ಶುಕ್ರವಾರ ಬಲೆಗೆ ಬಿದ್ದಿದೆ. ಕರ್ನಾಟಕ ವೈಲ್ಡ್ಲೈಫ್ ವೆಲ್‌ಫೇರ್ ಸೊಸೈಟಿಯ ಉರಗ ರಕ್ಷಕ ಸ್ನೇಕ್ ಯಲ್ಲಪ್ಪ ಹಾಗೂ ಅಡಿವೆಪ್ಪ ಹೊಸಕೋಟೆ ಅವರು ಕೋತಿಯನ್ನು ಸೆರೆ ಹಿಡಿದಿದ್ದಾರೆ. ಕೆಲ ದಿನಗಳಿಂದ ಗ್ರಾಮದಲ್ಲಿ ಕೆಂಪು ಕೋತಿಯ ಉಪಟಳ ಹೆಚ್ಚಾಗಿತ್ತು. ಮಕ್ಕಳು ಸೇರಿ 4- 5 ಜನರನ್ನು ಕಚ್ಚಿ ಗಾಯಗೊಳಿಸಿತ್ತು. ಈ ಕುರಿತು ಗ್ರಾಮಸ್ಥರು ಕರ್ನಾಟಕ ವೈಲ್ಡ್ಲೈಫ್ ವೆಲ್‌ಫೇರ್ ಸೊಸೈಟಿಯ ಯಲ್ಲಪ್ಪಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ್ದ ಯಲ್ಲಪ್ಪ ಕೋತಿಯನ್ನು ಬಲೆಗೆ ಬೀಳಿಸಿ ಮುಂಡಗೋಡ ಕಾಡಿಗೆ ಬಿಟ್ಟು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net