

ಕೊಪ್ಪಳ: ಸಮಾಜಕ್ಕೆ ನಮ್ಮಿಂದ ಒಳಿತಾಗಬೇಕು. ಇತರರ ಕಫ್ಟಿಗಳಿಗೆ ಸ್ಪಂದಿಸುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ಜೈನ ಭವನದಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ತರಬೇತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮನುಫ್ಯಿನಾಗಿ ಹುಟ್ಟಿದೆ ಮೇಲೆ ಸಮಾಜಮುಖಿಯಾಗಿ ಬದುಕಬೇಕು. ಕಾರ್ಯಾಗಾರದಲ್ಲಿ ಏಳು ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿರುವುದು ಖುಷಿಯಾಗುತ್ತದೆ. ಯುವಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕೆಲಸ. ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಒಂದಿಲ್ಲೊಂದು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿದೆ. ರಕ್ತನಿಧಿಯಿಂದ ಅನೇಕ ಜನರ ಜೀವ ಉಳಿದಿದೆ. ರಕ್ತ ತಯಾರು ಮಾಡಲಾಗದು. ಇನ್ನೊಬ್ಬರಿಂದ ಪಡೆದು ನೀಡಬೇಕು. ಎಲ್ಲರೂ ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸುವ ಕೆಲಸ ಮಾಡೋಣ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಯುವ ಕಾರ್ಯಾಗಾರದಲ್ಲಿ ಭಾಗವಹಿಸಿರುವ ನೀವೆಲ್ಲರೂ ಪುಣ್ಯವಂತರು. ಇದನ್ನು ಸದ್ಬಳಕೆ ಮಾಡಿಕೊಂಡು ಮನಪರಿವರ್ತನೆಯೊಂದಿಗೆ ಬೆಳೆಯಬೇಕು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಉಪಸಭಾಪತಿ ಆನಂದ ಎಸ್. ಜಿಗಜಿನ್ನಿ, ಬಿಜೆಪಿ ಮುಖಂಡ ಡಾ.ಬಸವರಾಜ ಕ್ಯಾವಟರ್ ಮಾತನಾಡಿದರು. ವಕೀಲ ಹನುಮಂತರಾವ್ ಕೆಂಪಳ್ಳಿ ಹಾಗೂ ಡಾ.ಎಂ.ಬಿ.ಪಾಟೀಲ್ ಉಪನ್ಯಾಸ ನೀಡಿದರು.
ಡಾ.ಮಂಜುನಾಥ ಸಜ್ಜನ ಮತ್ತು ಡಾ.ಭಾಗ್ಯಶ್ರೀ ಎರಡು ದಿನ ಯೋಗ ತರಬೇತಿ ನೀಡಿದರು. ಕೊಪ್ಪಳ ಶಾಖೆ ಸಭಾಪತಿ ಸೋಮರಡ್ಡಿ ಅಳವಂಡಿ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಡಾ.ಕೃಫ್ಣಿ ವಿ. ಓಂಕಾರ, ಸಹಾಯಕ ಔಫಿಧ ನಿಯಂತ್ರಕ ವೆಂಕಟೇಶ, ಡಾ. ಶ್ರೀನಿವಾಸ ಹ್ಯಾಟಿ, ಡಾ.ಗವಿಸಿದ್ದನಗೌಡ ಪಾಟೀಲ್, ಸುಧೀರ ಅವರಾಧಿ, ಡಾ.ಚಂದ್ರಶೇಖರ ಕರಮುಡಿ, ಡಾ.ಶಿವನಗೌಡ, ಡಾ.ದಾನರಡ್ಡಿ, ಡಾ. ಮಂಜುನಾಥ, ರಾಜೇಶ ಯಾವಗಲ್ ಇತರರಿದ್ದರು.