ಮರಗಳ ಹನನವೇ ಪರಿಸರ ಅಸಮತೋಲನಕ್ಕೆ ಕಾರಣ

udp-12-redcross
Published on

ಉಡುಪಿ: ದೇಶದಲ್ಲಿ ಇತ್ತೀಚೆಗೆ ಮರಗಳನ್ನು ಕಡಿಯುವುದೇ ಅಭಿವೃದ್ಧಿ ಎಂಬ ಮನೋಭಾವ ಬೆಳೆಯುತ್ತಿದೆ. ಈ ದೃಷ್ಟಿಕೋನವೇ ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ. ಅಶೋಕ್​ ಕಾಮತ್​ ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿ, ಚೆನ್ನೆ ಸಿ ಪಿ ಆರ್​ ಪರಿಸರ ಶಿಕ್ಷಣ ಕೇಂದ್ರ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಭಾರತೀಯ ರೆಡ್​ ಕ್ರಾಸ್​ ಸೊಸೈಟಿ ಸಹಭಾಗಿತ್ವದಲ್ಲಿ ಜಿಲ್ಲಾ ಶಿಕ್ಷಕರಿಗೆ "ಶಾಲೆಗಳಲ್ಲಿ ಕ್ಲೆಮೇಟ್​ ಸಾಕ್ಷರತೆ" ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ವರ್ಷದಿಂದ ತಾಪಂ ಮತ್ತು ಜಿಪಂನ ಶೇ. 30 ಶಿಕ್ಷಣ ನಿಧಿಯಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗುತ್ತಿದೆ. ಮಕ್ಕಳಿಗೆ ಕಲಿಕೆ ಆಪ್ತವಾಗುವ ಯೋಜನೆಗಳನ್ನು ರೂಪಿಸಿಕೊಳ್ಳಬಹುದು ಎಂದರು.

ನಿವೃತ್ತಿ ಬಳಿಕ ಬಹುಬೆಳೆ ಬೆಳೆಯಿರಿ

ಶಿಕ್ಷಕರು ನಿವೃತ್ತಿ ಬಳಿಕ ದೊರೆಯುವ ಹಣದಲ್ಲಿ ಒಂದೇ ತೆರೆನಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಇದರಿಂದ ಲಾಭಕ್ಕಿಂತ ನಷ್ಟವೇ ಅಧಿಕ. ಹೀಗಾಗಿ ಬಹುಬೆಳೆ ಕೃಷಿಗೆ ಆಸಕ್ತಿವಹಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ರೆಡ್​ ಕ್ರಾಸ್​ ಸೊಸೈಟಿ ಕಾರ್ಯದರ್ಶಿ ಡಾ. ಗಣನಾಥ್​ ಎಕ್ಕಾರು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಪರಿಸರ ಕಾರ್ಯಕರ್ತ ಕೆ.ಎಸ್​. ರವಿಕುಮಾರ್​ ಹಾಸನ,

ಸಿ ಪಿ ಆರ್​ ಪರಿಸರ ಶಿಕ್ಷಣ ಕೇಂದ್ರ ಚೆನೈ ಸಂಚಾಲಕ ರವಿಶಂಕರ್​ ಎಸ್​., ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಸಂತೋಷ್​ ನಾಯಕ್​ ಪಟ್ಲ, ಪತ್ರಕರ್ತ ಉದಯ್​ ಗಾಂವ್ಕರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net