ರೆಡ್​ಕ್ರಾಸ್​ ಸಂಸ್ಥೆ ಜಿಲ್ಲಾ ಶಾಖೆಗೆ ಚುನಾವಣೆ

election
Published on

ಬೆಳಗಾವಿ: ಭಾರತೀಯ ರೆಡ್​ಕ್ರಾಸ್​ ಸಂಸ್ಥೆಯ ಬೆಳಗಾವಿ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಗೆ ಮೊದಲ ಸಲ ಚುನಾವಣೆ ನಡೆಯುತ್ತಿದ್ದು, ಕಣದಲ್ಲಿರುವ 26 ಅಭ್ಯರ್ಥಿಗಳ ಪೈಕಿ, 10 ಜನ ಹೊಸಬರು ಪೆನಲ್​ ಮಾಡಿಕೊಂಡು ಕಣದಲ್ಲಿದ್ದೇವೆ ಎಂದು ಅಭ್ಯರ್ಥಿ ಅನಿಲ ಚೌಗುಲೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.30ರಂದು ಬಿಮ್ಸ್​ ಆವರಣದಲ್ಲಿನ ಬಿಐಎಂಎಸ್​ ಸಭಾಭವನದಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ನಮ್ಮ ಪೆನಲ್​ದಲ್ಲಿರುವ ಯಾರೂ ಈವರೆಗೆ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿಲ್ಲ. ಸಂಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರುವ ಉದ್ದೇಶದಿಂದ ಹೊಸಬರ ತಂಡದೊಂದಿಗೆ ಸ್ಪರ್ಧೆಗಿಳಿದಿದ್ದೇವೆ ಎಂದರು.

ಅಭ್ಯರ್ಥಿ ವಿನಾಯಕ ಗೋಡ್ಖಿಂಡಿ ಮಾತನಾಡಿ, ಅವಿರೋಧವಾಗಿಯೇ ಆಯ್ಕೆಯಾಗುತ್ತ ಬಂದಿದೆ. ಆದರೆ, ಈಚೆಗೆ ಜರುಗಿದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಚುನಾವಣೆ ಮೂಲಕವೇ ಕಾರ್ಯಕಾರಿ ಸಮಿತಿಯ 10 ಸ್ಥಾನ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಎಲ್ಲರೂ ಚುನಾವಣೆಗೆ ಮುಂದಾಗಿದ್ದೇವೆ. 3,000 ಸದಸ್ಯ ಮತದಾರರಿದ್ದು, ಒಬ್ಬರು 10 ಮತ ಚಲಾಯಿಸಬೇಕು. ಆಯ್ಕೆಯಾದ 10 ಸದಸ್ಯರಲ್ಲಿಯೇ ನಂತರ ಪದಾಧಿಕಾರಿಗಳ ಆಯ್ಕೆಯಾಗಲಿದೆ ಎಂದು ಮಾಹಿತಿ ನೀಡಿದರು.

ಕೆಂಪಣ್ಣ ಗೋಣಿ, ಗಿರೀಶ ಬುಡರಕಟ್ಟಿ, ಪ್ರಶಾಂತ ಕೋಣೆ, ಮಂಜುನಾಥ ಪಟ್ಟಣಶೆಟ್ಟಿ, ಶಿವಲಿಂಗ ಹಂಚಿನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net